Whats app ಬಳಕೆದಾರರಿಗೊಂದು ಸಿಹಿಸುದ್ದಿ……ಏನದು…?

whatsappವಾಷಿಂಗ್ಟನ್‌ : ವಾಟ್ಸ್‌ ಆ್ಯಪ್‌ನಲ್ಲಿ ಇತ್ತೀಚೆಗಷ್ಟೇ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್‌ ಮಾಡಿದರೆ ಅಡ್ಮಿನ್‌ ವಿರುದ್ದ ಕ್ರಮ ಕೈಗೊಂಡ ವಿಚಾರ ತಿಳಿದೇ ಇದೆ. ಆದರೆ ಈಗ ವಾಟ್ಸಾಪ್‌ ಹೊಸ ಅಧಿಕಾರವನ್ನು ಅಡ್ಮಿನ್‌ಗಳಿಗೆ ನೀಡಿದ್ದು, ಅವಹೇಳನಕಾರಿ ಸಂದೇಶಗಳು, ಪೋಸ್ಟ್‌ಗಳು, ಫೋಟೋಗಳನ್ನು ಕಳುಹಿಸುವವರನ್ನು ನಿರ್ಬಂಧಿಸುವ ಅಧಿಕಾರವನ್ನು ನೀಡಿದೆ.

ವ್ಯಾಬೆಟ್‌ ಇನ್ಫೋ ವೆಬ್‌ಸೈಟ್‌ ಈ ಬಗ್ಗೆ ವರದಿ ಮಾಡಿದ್ದು, ವಾಟ್ಸಾಪ್‌ನ ಈ ಅಭಿವೃದ್ಧಿ ಕುರಿತಂತೆ ಪ್ರಯೋಗಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಇದನ್ನು ಪರಿಚಯಿಸಲಾಗುತ್ತದೆ ಎಂದಿದೆ. ರಿಸ್ಟ್ರಿಕ್ಟ್ ಗ್ರೂಪ್‌ ಎಂಬುದನ್ನು ಆ್ಯಕ್ಟಿವೇಟ್ ಮಾಡಲು ಗ್ರೂಪ್‌ ಅಡ್ಮಿನ್‌ಗಳಿಗೆ ಮಾತ್ರ ಅವಕಾಶವಿರುತ್ತದೆ.

ಗುಂಪಿನಿಂದ ಸದಸ್ಯನನ್ನು ನಿಷೇಧಿಸಿದ ಬಳಿಕ ಆತ ಮೆಸೇಜ್‌ಗಳನ್ನು ಓದಬಹುದು. ಆದರೆ ಆತ ಅದಕ್ಕೆ ರಿಪ್ಲೆ ಮಾಡಲು ಸಾಧ್ಯವಿಲ್ಲ. ಮೆಸೇಜ್‌ ಅಡ್ಮಿನ್ ಎಂಬ ಬಟನ್‌ ಬಳಸಿ ಮೆಸೇಜ್‌ ಕಳಿಸಿ, ಅಡ್ಮಿನ್‌ ಅನುಮತಿ ಮೇರೆಗೆ ಮೆಸೇಜ್‌ಗಳನ್ನು ಪೋಸ್ಟ್ ಮಾಡುವ ಅವಕಾಶವಿದೆ.

Leave a Comment