Weight Lifting : ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತದ ಮೀರಾಬಾಯಿ ಚಾನು

meera-bai-chanuಭಾರತದ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ ಅಮೇರಿಕದ ಅನಹೀಂ ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಬರೋಬ್ಬರಿ ಎರಡು ದಶಕಗಳ ನಂತರ ಭಾರತಕ್ಕೆ ವೇಟ್ ಲಿಫ್ಟಿಂಗ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಒಲಿದಿದೆ. 48 ಕೆ.ಜಿ ವಿಭಾಗದ ಮಹಿಳೆಯರ ಚಾಂಪಿಯನ್ಷಿಪ್ ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು 85, 109 ಹಾಗೂ 194 ಕೆ.ಜಿ ಭಾರವನ್ನು ಎತ್ತಿ ಬಂಗಾರವನ್ನು ತಮ್ಮದಾಗಿಸಿಕೊಂಡರು.
ಈ ಮೊದಲು 1994 ಹಾಗೂ 1995 ರಲ್ಲಿ ಕರ್ಣಂ ಮಲ್ಲೇಶ್ವರಿ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಆಂದ್ರಪ್ರದೇಶದ ಕರ್ಣಂ ಮಲ್ಲೇಶ್ವರಿ 2000ನೇ ಇಸವಿಯಲ್ಲಿ ನಡೆದ ಸಿಡ್ನಿ ಓಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಮೀರಾಬಾಯಿ ಚಾನು ಭಾರತೀಯ ರೇಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

Leave a Comment