WATCH : ‘ನನಗೆ ವಯಸ್ಸಾಯ್ತು ಅನ್ಕೋಬೇಡಿ’ : ಕನ್ನಡಿಗರಿಗೆ ಪತ್ರ ಬರೆದ ರೆಬೆಲ್‌ ಸ್ಟಾರ್‌ ಅಂಬರೀಶ್‌

ambarishaಬೆಂಗಳೂರು : ಅಂಬಿ ನಿನಗೆ ವಯಸ್ಸಾಯ್ತೋ ಹೆಸರಿನ ಸಿನಿಮಾದ ಮಹೂರ್ತ ಇತ್ತೀಚೆಗಷ್ಟೇ ನೆರವೇರಿದೆ. ಕಿಚ್ಚ ಸುದೀಪ್‌ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ನಟಸುತ್ತಿರುವ ಈ ಸಿನಿಮಾದ ಟೈಟಲ್‌ ಟೀಸರ್ ರಿಲೀಸ್‌ ಆಗಿದೆ.

ಅಂಬರೀಶ್ ಅವರ ಧ್ವನಿಯಲ್ಲೇ ಈ ಟೀಸರ್ ಹೊರಬಂದಿರುವುದು ವಿಶೇಷ. ಅಲ್ಲದೆ ಎಲ್ಲಾ ಸಿನಿಮಾಗಳಂತೆ ಅಲ್ಲದೆ ವಿಭಿನ್ನ ರೀತಿಯಲ್ಲಿ ಟೀಸರ್‌ ಬಿಡುಗಡೆ ಮಾಡಲಾಗಿದೆ. ಅಂಬರೀಶ್ ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ಆ ಪತ್ರದಲ್ಲಿ ತಮ್ಮ ಹುಟ್ಟು, ಬಾಲ್ಯ, ಸಿನಿಮಾ, ಮದುವೆ, ರಾಜಕೀಯ ಜೀವನ….ಹೀಗೆ ತಮ್ಮ ಜೀವನ ಸಾಗಿ ಬಂದ ಹಾದಿಯನ್ನು ಹೇಳಿದ್ದಾರೆ. ಕೊನೆಗೆ ಇಷ್ಟೊತ್ತು ಅಮರನಾಥ್‌ ಆಗಿ ಮಾತನಾಡಿದೆ. ಈಗ ನಿಮ್ಮ ಪ್ರೀತಿಯ ಅಂಬಿಯಾಗಿ ಹೇಳ್ತಿದ್ದೀನಿ ಕೇಳಿ, ನೀವೆಲ್ಲ ಥಿಯೇಟರ್‌ಗೆ ಬಂದು ಆಶಿರ್ವಾದ ಮಾಡ ಎಂದು ತಮ್ಮದೇ ಸ್ಠೈಲ್‌ನಲ್ಲಿ ಆಹ್ವಾನಿಸಿದ್ದಾರೆ.

ಟೀಸರ್ ವಿಭಿನ್ನವಾಗಿದ್ದು, ಪ್ಯಾಮಿಲಿ ಎಂಟರ್ಟೈನ್‌ಮೆಂಟ್ ಸಿನಿಮಾ ಎಂಬುದಂತೂ ಸತ್ಯ. ಇನ್ನು ಕಿಚ್ಚ ಸುದೀಪ್‌ ಸಹ ಸಿನಿಮಾದಲ್ಲಿ ಅಭಿನಯಿಸುತ್ತಿರುವುದರಿಂದ ಜನರ ಕುತೂಹಲ ಹೆಚ್ಚು ಮಾಡಿದೆ.

Leave a Comment