ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು : ವಿರೋಧಿಗಳ ವಿರುದ್ದ ರವಿ ಬೆಳಗೆರೆ ಅಕ್ಷರ ಯುದ್ದ

ravi-belegereಬೆಂಗಳೂರು : ಪತ್ರಕರ್ತ ಸುನಿಲ್‌ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿರುವ ಆರೋಪ ಎದುರಿಸಿ ಮರು ದಿನ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರವಿ ಬೆಳಗೆರೆ ಜೈಲಿನಲ‌್ಲಿದ್ದುಕೊಂಡೇ ಹಾಯ್‌ ಬೆಂಗಳೂರು ಪತ್ರಿಕೆಗೆ ಲೇಖನ ಬರೆದಿದ್ದಾರೆ.
ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು ಎನ್ನುವ ಹೆಡ್‌ಲೈನ್‌ನನ್ನು ನೀಡಿ ನೋಟ್ಸ್ ಫ್ರಮ್‌ ಸೆಂಟ್ರಲ್‌ ಜೈಲ್‌ ಎಂಬ ಟ್ಯಾಗ್‌ ಲೈನ್‌ ನೀಡಲಾಗಿದೆ. ಈ ಮೂಲಕ ಸುನಿಲ್‌ ಹೆಗ್ಗರವಳ್ಳಿ ವಿರುದ್ದ ಅಕ್ಷರ ಸಮರ ಆರಂಭಿಸಿದ್ದಾರೆ.

ಸುನಿಲ್‌ ಹೆಗ್ಗರವಳ್ಳಿ ಹಾಗೂ ಪೊಲೀಸ್‌ ಅಧಿಕಾರಿಯೊಬ್ಬರು ಹೆಣೆದ ಬಲಹೀನ ಜಾಲವಿದು ಎಂದು ಬರೆದಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ, ನಾನು ಕ್ರೈಂ ಬರೆದಿದ್ದೇನೆ, ಟಿವಿಯಲ್ಲಿ ತೋರಿಸಿದ್ದೇನೆ. ಅಪರಾಧಿಗಳನ್ನು ನೋಡಿದ್ದೇನೆ. ಅಂತಹ ನಾನು 15 ವರ್ಷಗಳಿಂದ ಜತೆಗಿರುವವನನ್ನು ಕೊಲ್ಲಲು ಸುಪಾರಿ ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ.

ಐ ಯಾಮ‌್‌ ಬೋಲ್ಡ್‌, ಹಾನೆಸ್ಟ್‌ ಎಂಡ್‌ ಅಪ್‌ರೈಟ್‌ ಎಂದು ಬರೆದಿರುವುದಾಗಿ ಹೇಳಲಾಗಿದೆ.

Leave a Comment