TV9 ನಿರೂಪಕ “ರಂಭಾ” ವಿರುದ್ದ HDK ಲಂಚದ ಆರೋಪ : ಸತ್ಯ ಬಿಚ್ಚಿಡ್ತು screen shot

kumaraswamyಬೆಂಗಳೂರು : ಟಿವಿ 9ನ ನಿರೂಪಕ ರಂಗನಾಥ್ ಭಾರದ್ವಾಜ್‌ ಅವರು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿಯವರಿಗೆ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಲ್ಲದೆ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಎಚ್‌ಡಿಕೆಯವರನ್ನು ಟಿವಿ 9 ಸಂವಾದಕ್ಕೆ ಆಹ್ವಾನಿಸಲಾಗಿದ್ದು, ಅಲ್ಲಿ ನಿರೂಪಕ ರಂಗನಾಥ್ ಭಾರದ್ವಾಜ್‌ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಎಚ್‌ಡಿಕೆ ಆರೋಪಿಸಿದ್ದರು. ಚಾನಲ್‌ ವಿರುದ್ದ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದು, ಎಲ್ಲೆಡೆ ವೈರಲ್‌ ಆಗಿತ್ತು. ಅಲ್ಲದೆ ಇಷ್ಟೆಲ್ಲ ನಡೆಯಲು ರಂಗನಾಥ್‌ ಭಾರದ್ವಾಜ್ ಕಾರಣ ಎಂದೂ ಆರೋಪಿಸಿದ್ದರು.

ಈ ಆರೋಪಕ್ಕೆ ಪುಷ್ಠಿ ನೀಡುವಂತೆ ರಂಗನಾಥ್ ಭಾರದ್ವಾಜ್‌ ತಮ್ಮ ಸ್ನೇಹಿತರೊಬ್ಬರಿಗೆ ಕುಮಾರಸ್ವಾಮಿಯವರ ವಿಡಿಯೊವನ್ನು ಸೆಂಡ್‌ ಮಾಡಿ ಅದರ ಕೆಳಗೆ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯ ಅಂತ್ಯ ..ನೋಡ್ತಾ ಇರು ಎಂದು ಸಂದೇಶ ಕಳುಹಿಸಿದ್ದರು. ಈ ಸಂದೇಶದ ಸ್ಕ್ರೀನ್ ಶಾಟ್‌ ಎಚ್‌ಡಿಕೆಗೆ ತಲುಪಿದೆ.

ಇದಕ್ಕೆ ಎಚ್‌ಡಿಕೆ ಪ್ರತಿಕ್ರಿಯಿಸಿದ್ದು, ಜನನಾಯಕನ ರಾಜಕೀಯ ಭವಿಷ್ಯವಿರುವುದು ರಾಜ್ಯದ ಜನರ ಕೈಯಲ್ಲೇ ಹೊರತು ಕೆಲ ಟಿವಿ ಸಿಬ್ಬಂದಿಯಿಂದಲ್ಲ ಎಂದಿದ್ದಾರೆ.

Leave a Comment