ತನ್ನಿಷ್ಟದ ಕಾರನ್ನೇ ಮಾರಲು ಹೊರಟ ಕಿಚ್ಚ…..ಕಾರಣ ಕೇಳಿದ್ರೆ ಕರಗಿ ಹೋಗ್ತೀರಾ….

suddepಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌. ತಮ್ಮ ಸರಳತೆ, ಶಿಸ್ತಿನಿಂದ ಅಭಿಮಾನಿಗಳ ಮನಗೆದ್ದ ನಟ. ಬಡವರ ಕಂಡರೆ ಇವರಿಗೆ ಮೊದಲಿನಿಂದಲೂ ಪ್ರೀತಿ ಸ್ವಲ್ಪ ಜಾಸ್ತಿಯೇ. ಅವರಿಗಾಗಿ ತಮ್ಮ ಹುಟ್ಟುಹಬ್ಬದ ಆಡಂಬರವನ್ನೇ ನಿಲ್ಲಿಸಿದ್ದರು ಎಂಬುವುದು ಎಲ್ಲರಿಗೂ ತಿಳದೇ ಇದೆ.

ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಸುದೀಪ್‌ ನೂರಾರು ಮಂದಿಗೆ ಸಹಾಯ ಮಾಡಿದ್ದಾರೆ. ಆದರೆ ಈ ಬಗ್ಗೆ ಹೊರ ಪ್ರಪಂಚಕ್ಕೆ ತಿಳಿದಿರುವುದು ಬಹಳ ಕಡಿಮೆಯೇ. ಹತ್ತಾರು ಶಾಲೆಗಳನ್ನು ದತ್ತು ಪಡೆದು ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ.

ಆದರೆ ಸಹಾಯ ಮಾಡುವ ಮನಸ್ಸಿರುವ ಕಿಚ್ಚ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅನ್ನದಾತರ ನೆರವಿಗೆ ನಿಂತಿರುವ ಕಿಚ್ಚ, ರೈತರಿಗೆ ಸಹಾಯ ಮಾಡುವ ದೃಷ್ಠಿಯಿಂದ ತಮ್ಮ ಪ್ರೀತಿಯ ಕಾರುಗಳನ್ನೇ ಮಾರಲು ಮುಂದಾಗಿದ್ದಾರೆ. ಕಿಚ್ಚ ತಮ್ಮ ಸಮಪಾದನೆಯಿಂದ ತಮಗಿಷ್ಟವಾದ ಒಂದಷ್ಟು ಕಾರುಗಳನ್ನು ಖರೀದಿಸಿದ್ದರು. ಆದರೆ ರೈತನ ಕಷ್ಟದ ಮುಂದೆ ನನ್ನ ಕಾರು ಏನೂ ಅಲ್ಲ ಎಂದಿರುವ ಸುದೀಪ್‌ ಆ ಕಾರುಗಳನ್ನು ಮಾರಿ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಇತ್ತೀಚೆಗಷ್ಟೇ ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಸುದೀಪ್‌ ಈ ಮಾತುಗಳನ್ನು ಹೇಳಿದ್ದಾರೆ. ಇಷ್ಟೆಲ್ಲಾ ಮಾಡುತ್ತಿರುವ ಸುದೀಪ್‌ ಮೇಲೆ ಅಭಿಮಾನ ಹೆಚ್ಚಾಗದಿರಲು ಸಾಧ್ಯವೇ ಇಲ್ಲ.

Leave a Comment