ಸನ್ನಿ ಲಿಯೋನ್ ವಿರುದ್ದ ಪೊರಕೆ ಹಿಡಿದು ನಿಂತ ಬೆಂಗಳೂರಿನ ಮಹಿಳಾಮಣಿಯರು….?

sannileyonಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಸನ್ನಿ ನೈಟ್ಸ್‌ ಕಾರ್ಯಕ್ರಮದ ವಿರುದ್ದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಬೆಂಗಳೂರಿನ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಈ ಹಿಂದೆ ನಡೆಸಿದ ಪ್ರತಿಭಟನೆಯಂತೆಯೇ ಕರವೇ ಕಾರ್ಯಕರ್ತರು ಈ ಬಾರಿಯೂ ಪ್ರತಿಬಟನೆ ನಡೆಸಿದ್ದು, ಮಾನ್ಯತಾ ಟೆಕ್ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ, ಸನ್ನಿ ಭಾವಚಿತ್ರಕ್ಕೆ ಪೊರಕೆಯಲ್ಲಿ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ 31ರಂದು ರಾತ್ರಿ ಟೈಮ್ಸ್‌ ಕ್ರಿಯೇಷನ್‌ ವತಿಯಿಂದ ಮಾನ್ಯತಾ ಟೆಕ್‌ ಪಾರ್ಕ್‌ ವೈಟ್‌ ಆರ್ಕಿಡ್‌ನಲ್ಲಿ ಸನ್ನಿ ನೈಟ್ ಕಾರ್ಯಕ್ರಮ ಆಯೋಜಿಸಿದೆ. ಆದರೆ ಇದಿ ನಮ್ಮ ನೆಲದ ಸಂಸ್ಕೃತಿಗೆ ವಿರೋಧವಾದುದಾಗಿದ್ದು, ಪರಭಾಷಿಕರು ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಕಾರ್ಯಕ್ರಮಕ್ಕೆ ಅವಕಾಶ ನೀಡಲು ನಿರಾಕರಿಸಿದ್ದಾರೆ.

Leave a Comment