ಸಮುದ್ರದಲ್ಲಿ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆ: ವಿಜ್ಞಾನಿಗಳ ಸಂಶೋಧನೆ

aktopusಲಂಡನ್‌, ನವೆಂಬರ್ 18 : ಸಮುದ್ರದಲ್ಲಿ ಹತ್ತು ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ಆಳದಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಬ್ರಿಟನ್‌ನ ನ್ಯೂಕ್ಯಾಸೆಲ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಪ್ಲಾಸ್ಟಿಕ್‌ ಈಗ ಸಾಗರದ ಅತ್ಯಂತ ಆಳಕ್ಕೂ ತಲುಪಿರುವುದು ಮಾತ್ರವಲ್ಲದೇ, ಅದು ಅಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆ ಸೇರಿರುವುದನ್ನು ಸಂಶೋಧಕರು ಸಾಬೀತು ಪಡಿಸಿದ್ದಾರೆ.

‘ಮರಿಯಾನ, ಜಪಾನ್‌, ಇಝು–ಬೊನಿನ್‌, ಪೆರು–ಚಿಲಿ, ನ್ಯೂ ಹೆಬ್ರೈಡ್ಸ್‌ ಮತ್ತು ಕೆರ್ಮಡೆಕ್‌ನ ಆಳವಾದ ಕಂದಕ ಸೇರಿದಂತೆ ಪೆಸಿಫಿಕ್‌ ಮಹಾಸಾಗರದಲ್ಲಿ ಕಂಡು ಬರುವ ಚಿಪ್ಪುಜೀವಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಅಲಾನ್‌ ಜೇಮಿಸನ್‌ ತಿಳಿಸಿದ್ದಾರೆ.

Leave a Comment