RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು

ನವದೆಹಲಿ, ಸೆ 5: ತನ್ನ ನೇರ ಮತ್ತು ದಿಟ್ಟ ಅಭಿಪ್ರಾಯಗಳಿಗೆ ಹೆಸರಾಗಿರುವ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುರಾಂ ರಾಜನ್ ಅವರಿಗೆ ಕಚೇರಿಯಲ್ಲಿ ಭಾನುವಾರ (ಸೆ 4) ಕೊನೆಯ ವರ್ಕಿಂಗ್ ಡೇ.

ಜಾಗತಿಕ ಆರ್ಥಿಕ ಮುಗ್ಗಟ್ಟಿನ ಮಧ್ಯೆ, ಮೂರು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿಕೊಂಡ ರಘುರಾಂ ರಾಜನ್, ದೇಶದ ಹಣದುಬ್ಬರದ ವಿಚಾರದಲ್ಲಿ ತೆಗೆದುಕೊಂಡ ಕೆಲವೊಂದು ಕಠಿಣ ನಿರ್ಧಾರಗಳು ವ್ಯಾಪಕ ಚರ್ಚೆಗೊಳಗಾಗಿದ್ದವು. (ಆರ್ಬಿಐ ಗವರ್ನರ್ ಆಗಿ ಊರ್ಜಿತ್ ಪಟೇಲ್)

ರಿಸರ್ವ್ ಬ್ಯಾಂಕಿನ್ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಚರ್ಚಿತ ಗವರ್ನರ್ ಆಗಿರುವ ರಘುರಾಂ ರಾಜನ್ ಅವರನ್ನು ಬ್ಯಾಂಕಿನ ಸಹದ್ಯೋಗಿಗಳು, ಕಲರ್ ಫುಲ್ ಆಗಿ ಭಾನುವಾರ ಬೀಳ್ಕೊಟ್ಟಿದ್ದಾರೆ. ಆರ್ಬಿಐನ ನೂತನ ಗವರ್ನರ್ ಆಗಿ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕರಿಸಲಿದ್ದಾರೆ.

‘ಸುಸ್ವಾಗತಂ, ಕಭೀ ಅಲ್ವಿದಾ ನಕೆಹ್ನಾ’ ಮುಂತಾದ ಬರಹಗಳನ್ನೊಳಗೊಂಡ ರಂಗೋಲಿಗಳು ರಿಸರ್ವ್ ಬ್ಯಾಂಕ್ ಕಚೇರಿಯಲ್ಲಿ ರಘುರಾಂ ರಾಜನ್ ಅವರನ್ನು ಸ್ವಾಗತಿಸುತ್ತಿದ್ದವು.

ತಮಿಳು ಮೂಲದ ರಘುರಾಂ ರಾಜನ್, ಮಧ್ಯಪ್ರದೇಶದ ಭೋಪಾಲ್ ನಲ್ಲಿ 03.02.1963ರಲ್ಲಿ ಜನಿಸಿದ್ದರು. ಚಿಕಾಗೋ ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ, ವಿಶ್ವ ಬ್ಯಾಂಕಿನಲ್ಲೂ ಕೆಲಸ ಮಾಡಿರುವ ರಘುರಾಂ ರಾಜನ್, ಸೆಪ್ಟಂಬರ್ 04, 2013ರಂದು ಆರ್ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು.

ನನ್ನ ಅವಧಿ ಮುಗಿದ ನಂತರ ನನಗೆ ಅಚ್ಚುಮೆಚ್ಚಿನ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುತ್ತೇನೆ. ಅಮೆರಿಕಾದ ಚಿಕಾಗೋ ವಿವಿಯಲ್ಲಿ ಪ್ರೊಫೆಸರ್ ಆಗಿ ಮುಂದುವರಿಯಲಿದ್ದೇನೆಂದು ತನ್ನ ಸಹೋದ್ಯೋಗಿಗಳಿಗೆ ಬರೆದಿರುವ ವಿದಾಯ ಪತ್ರದ ಮೂಲಕ ರಘುರಾಂ ರಾಜನ್ ತಿಳಿಸಿದ್ದರು.

ಬ್ಯಾಂಕ್ ವಲಯದಲ್ಲಿ ‘ರಾಕ್ ಸ್ಟಾರ್’ ಎಂದೇ ಹೆಸರಾಗಿರುವ ರಘುರಾಂ ರಾಜನ್ ಅವರ ಟಾಪ್ ಟೆನ್ ಹೇಳಿಕೆಗಳು, ಸ್ಲೈಡಿನಲ್ಲಿ (ಮಾಹಿತಿ : ಟೈಮ್ಸ್ ಆಫ್ ಇಂಡಿಯಾ)

Leave a Comment