Hockey World League : ಜರ್ಮನಿಯನ್ನು ಸೋಲಿಸಿ ಕಂಚು ಗೆದ್ದ ಭಾರತ

hockeyಹಾಕಿ ವರ್ಲ್ಡ್ ಲೀಗ್ ಫೈನಲ್ ‘ ಟೂರ್ನಿಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ. ರವಿವಾರ ಓರಿಸ್ಸಾ ರಾಜಧಾನಿ ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ, ಜರ್ಮನಿಯನ್ನು 2-1 ಅಂತರದಿಂದ ಮಣಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಭಾರತದ ಪರವಾಗಿ ಎಸ್ ವಿ ಸುನಿಲ್, ಪಂದ್ಯದ 21 ನೇ ನಿಮಿಷದಲ್ಲಿ ಹಾಗೂ ಹರ್ಮನ್ ಪ್ರೀತ್ ಸಿಂಗ್ 54 ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಜರ್ಮನಿ ಪರವಾಗಿ ಮಾರ್ಕ್ ಅಪೆಲ್ 36ನೇ ನಿಮಷದಲ್ಲಿ ಗೋಲ್ ದಾಖಲಿಸಿದರು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿ ಸೆಮಿಸ್ ತಲುಪಿತ್ತು. ಆದರೆ ಸೆಮಿಫೈನಲ್ ನಲ್ಲಿ ಭಾರತ ಅರ್ಜೆಂಟೀನಾ ತಂಡಕ್ಕೆ ಶರಣಾಗಿತ್ತು.

Leave a Comment