In Pic : ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ Mr & Mrs ರಾಮಾಚಾರಿ….

radhika&yashಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 1 ವರ್ಷ ಪೂರೈಸಿದೆ.

ಕಳೆದ ವರ್ಷ ಇದೇ ದಿನದಂದು ಯಶ್‌ ಹಾಗೂ ರಾಧಿಕಾ ಪಂಡಿತ್‌ ತಾಜ್ ವೆಸ್ಟೆಂಡ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನ ಈ ಜೋಡಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೆ ರಾಧಿಕಾ ಪಂಡಿತ್‌ ತಮ್ಮ ಮದುವೆಯ ಎಕ್ಸ್‌ಕ್ಲ್ಯೂಸಿವ್‌ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ಮದುವೆ ವಾರ್ಷಿಕೋತ್ಸದ ದಿನ ಸಮೀಪಿಸುತ್ತಿದ್ದಂತೆ ನಟಿ ರಾಧಿಕಾ ತಮ್ಮ ಫೇಸ್ಬುಕ್‌ ಹಾಗೂ ಇನ್ಸ್ಟಾಗ್ರಾಂನಲ್ಲಿ ಕಳೆದ ವರ್ಷದ ಮದುವೆಯ ಕ್ಷಣಗಳ ಫೋಟೋಗಳನ್ನು ಪೋಸ್ಟ್‌ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಇಂದು ಮದುವೆಯ ಸುಂದರ ಫೋಟೋವನ್ನು ಪೋಸ್ಟ್ ಮಾಡಿರುವ ರಾಧಿಕಾ ಮಿಸ್‌ನಿಂದ ಮಿಸಸ್‌ ಆದ ದಿನವಿದು, ಜೀವನದ ಅಮೂಲ್ಯ ಘಳಿಗೆ ಎಂದು ಶೀರ್ಷಿಕೆ ನೀಡಿದ್ದಾರೆ.

ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿರುವ ಈ ಜೋಡಿ ವಿದೇಶಕ್ಕೆ ಹಾರಿದ್ದು, ಕೆಲ ದಿನ ಅಲ್ಲೇ ಸುತ್ತಾಡಿಕೊಂಡು ಬಳಿಕ ತಮ್ಮ ತಮ್ಮ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಯಶ್‌, ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 3 ಹೊಸ ಕಾರುಗಳನ್ನು ಖರೀದಿಸಿ ರಾಧಿಕಾ ತಂದೆ -ತಾಯಿಗೆ ಉಡುಗೊರೆಯಾಗಿ ನೀಡಿದ್ದರು.

Leave a Comment