Hockey world league : ಸೆಮಿಫೈನಲ್ ನಲ್ಲಿ ಅರ್ಜೆಂಟೀನಾಗೆ ಶರಣಾದ ಭಾರತ

hockey-world-leageಓರಿಸ್ಸಾ ರಾಜಧಾನಿ ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಶುಕ್ರವಾರ ನಡೆದ ಹಾಕಿ ವರ್ಲ್ಡ್ ಲೀಗ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅರ್ಜೆಂಂಟೀನಾ ತಂಡದೆದುರು 0-1 ಅಂತರದ ಸೋಲನುಭವಿಸಿದೆ. ಈ ಮೂಲಕ ಫೈನಲ್ ತಲುಪುವ ಆತಿಥೇಯ ಭಾರತ ತಂಡದ ಕನಸು ಈಡೇರಲಿಲ್ಲ.

ಅರ್ಜೆಂಟೀನಾ ಪರವಾಗಿ ಗೊನಜಾಲೋ ಪೆಲಟ್ ಪಂದ್ಯದ 17ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಭಾರತದ ನಾಯಕ ಮನಪ್ರೀತ್ ಸಿಂಗ್ 22 ನೇ ನಿಮಷದಲ್ಲಿ ಹಳದಿ ಕಾರ್ಡ್ ತೋರಿಸಲಾಯಿತು. ಪಂದ್ಯದ ಕೊನೆಯ ಹಂತದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸದರೂ, ಅರ್ಜೆಂಟೀನಾ ತಂಡದ ರಕ್ಷಣಾತ್ಮಕ ಆಟದಿಂದಾಗಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಸೋಲಿಸಿದ್ದ ಭಾರತ ಸೆಮಿಫೈನಲ್ ತಲುಪಿತ್ತು. ಭಾರತ ರವಿವಾರ ಕಂಚಿನ ಪದಕಕ್ಕಾಗಿ ಎರಡನೇ ಸೆಮಿಫೈನಲ್ ನಲ್ಲಿ ಸೋತ ತಂಡದೊಂದಿಗೆ ಹೋರಾಟ ನಡೆಸಲಿದೆ.

Leave a Comment