Badminton : ಹಾಂಕಾಂಗ್ ಸೂಪರ್ ಸಿರೀಸ್ ಸೆಮಿಫೈನಲ್ ತಲುಪಿದ ಸಿಂಧು

sinduಭಾರತದ ಬ್ಯಾಡ್ಮಿಂಟನ್ ತಾರೆ ಆಟಗಾರ್ತಿ ಪಿ.ವಿ ಸಿಂಧು ಹಾಂಕಾಂಗ್ ಓಪನ್ ಸೂಪರ್ ಸಿರೀಸಿನ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನಿನ ಅಕಾನೆ ಯಾಮಾಗುಚಿ ವಿರುದ್ಧ 21-12, 21-19 ಪಾಯಿಂಟ್ ಗಳಿಂದ ಜಯಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.

ವಿಶ್ವದ 2ನೇ ಶ್ರೇಂಯಾಂಕಿತ ಆಟಗಾರ್ತಿ ಸಿಂಧು 5 ನೇ ಶ್ರೇಯಾಂಕಿತ ಆಟಗಾರ್ತಿ ಯಾಮಾಗುಚಿಯ ನಡುವಿನ ಈ ಪಂದ್ಯ ಒಟ್ಟು 37 ನಿಮಿಷ ನಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡಿನ ರಚನಾಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ.

ವಿಶ್ವದ 6ನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿಯಾದ ರಚನಾಕ್ ಇಂಟನಾನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಷೆಲ್ ಲೀ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.

Leave a Comment