FootBall : 5ನೇ ಬಾರಿಗೆ Ballon d’Or ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೋ ರೊನಾಲ್ಡೊ

kristiyano-ronaldoವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ, ಕ್ರಿಸ್ಟಿಯಾನೋ ರೊನಾಲ್ಡೊ 5ನೇ ಬಾರಿಗೆ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಹಾಗೂ ನೆಯ್ಮರ್ ಜೂನಿಯರ್ ಅವರನ್ನು ಹಿಂದಿಕ್ಕಿದ ರೊನಾಲ್ಡೊ, ಪ್ರಶಸ್ತಿ ಜಯಿಸಿದ್ದಾರೆ.

ಇದಕ್ಕೂ ಮುಂಚೆ ರೊನಾಲ್ಡೊ 2008, 2013, 2014, 2016 ರ ಸಾಲಿನ Ballon d’Or ಪ್ರಶಸ್ತಿ ಗೆದ್ದಿದ್ದರು. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಕೂಡ 5 ಬಾರಿ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಪ್ಯಾರಿಸ್ ನ ಐಫೆಲ್ ಟಾವರ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೊನಾಲ್ಡೊ, ‘ ಸಹಜವಾಗಿಯೇ ನನಗೆ ಇದರಿಂದ ಖುಷಿಯಾಗಿದೆ. ಪ್ರತಿ ವರ್ಷವೂ ನಾನು ಇದನ್ನು ಇದಿರು ನೋಡುತ್ತೇನೆ. ಕಳೆದ ವರ್ಷ ಟ್ರೋಫಿಗಳನ್ನು ಗೆದ್ದಿದ್ದು, ಈ ಪ್ರಶಸ್ತಿ ದೊರೆಯಲು ಕಾರಣವಾಯಿತು. ರಿಯಲ್ ಮ್ಯಾಡ್ರಿಡ್ ತಂಡದ ಸಹ ಆಟಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಹಂತಕ್ಕೆ ತಲುಪಲು ಸಹಾಯ ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು ‘ ಎಂದಿದ್ದಾರೆ.

Leave a Comment