30 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ

30 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ

ಹೊಸದಿಲ್ಲಿ: ಬುಧವಾರ ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ದರ 450 ರೂ. ಏರಿಕೆಯಾಗಿದ್ದು, 31,550 ರೂ. ಮುಟ್ಟಿದೆ. ಇದು ಕಳೆದ 30 ತಿಂಗಳಲ್ಲಿ ಗರಿಷ್ಠ ದರವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಜ್ಯುವೆಲ್ಲರ್‌ಗಳ ಖರೀದಿ ಭರಾಟೆ ಮತ್ತು ಜಾಗತಿಕ ಪ್ರಭಾವದಿಂದ ದರ ಏರುಗತಿಯಲ್ಲಿದೆ. ಬೆಳ್ಳಿ ದರವು 1 ಕೆ.ಜಿಗೆ 1,016 ರೂ. ಹೆಚ್ಚಿದ್ದು, 47,000 ರೂ. ಮಟ್ಟವನ್ನು ಮುಟ್ಟಿದಂತಾಗಿದೆ. ದಿಲ್ಲಿಯಲ್ಲಿ ಬೆಳ್ಳಿ ದರ 47,425 ರೂ. ಇತ್ತು. ನಾಣ್ಯ ತಯಾರಕರು ಮತ್ತು ಇತರೆ ಉದ್ಯಮಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ಬೆಳ್ಳಿ ದರವೂ ಏರಿಕೆಯಾಗುತ್ತಿದೆ. ”ಸೆಪ್ಟೆಂಬರ್‌ನಲ್ಲಿ ಅಮೆರಿಕದ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆಗಳು ಕಡಿಮೆಯಾಗಿದ್ದು, ಇದು ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ. ಸುರಕ್ಷಿತ ಹೂಡಿಕೆ ಸ್ವರ್ಗಗಳಾದ ಚಿನ್ನದತ್ತ ಹೂಡಿಕೆದಾರರು ಗಮನ…

Continue Reading ...

899 ರುಪಾಯಿಗೆ ವಿಮಾನದಲ್ಲಿ ದೇಶ ಸುತ್ತುವ ಅವಕಾಶ

899 ರುಪಾಯಿಗೆ ವಿಮಾನದಲ್ಲಿ ದೇಶ ಸುತ್ತುವ ಅವಕಾಶ

ಬೆಂಗಳೂರು, ಸೆಪ್ಟೆಂಬರ್ 07 : ಅತಿ ಕಡಿಮೆ ವೆಚ್ಚದಲ್ಲಿ ದೇಶದ ಒಳಗೆ ಹಾರಾಟ ನಡೆಸುವ ಅವಕಾಶವನ್ನು ಏರ್ ಏಷ್ಯಾ ನಿಮ್ಮ ಮುಂದೆ ಇಡುತ್ತಿದೆ. ಕೇವಲ 899 ರು. ನೀಡಿದರೆ ಸಾಕು ವಿಮಾನ ಹಾರಾಟದ ಸವಿಯನ್ನು ಅನುಭವಿಸಿ ನಿಮ್ಮ ನೆಚ್ಚಿನ ಜಾಗಕ್ಕೆ ತೆರಳಲು ಸಾಧ್ಯ. ನೆನಪಿರಲಿ ಸೆಪ್ಟೆಂಬರ್ 11 ರ ಒಳಗೆ ಬುಕ್ ಮಾಡಿದವರಿಗೆ ಮಾತ್ರ ಸೌಲಭ್ಯ. ಬೆಂಗಳೂರು, ಜೈಪುರ, ಹೈದರಾಬಾದ್, ನವದೆಹಲಿ ಎಲ್ಲಿಗೆ ಪ್ರಯಾಣ ಮಾಡುವುದಿದ್ದರೂ ಕೇವಲ 899 ರು. ನೀಡಿದರೆ ಸಾಕು. ಮೇಕ್ ಮೈ ಟ್ರಿಪ್, ಯಾತ್ರಾ ಬಳಕೆ ಮಾಡಿಕೊಂಡು ಟಿಕೆಟ್ ಬುಕ್ ಮಾಡಬಹುದು

Continue Reading ...

RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು

RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು

ನವದೆಹಲಿ, ಸೆ 5: ತನ್ನ ನೇರ ಮತ್ತು ದಿಟ್ಟ ಅಭಿಪ್ರಾಯಗಳಿಗೆ ಹೆಸರಾಗಿರುವ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುರಾಂ ರಾಜನ್ ಅವರಿಗೆ ಕಚೇರಿಯಲ್ಲಿ ಭಾನುವಾರ (ಸೆ 4) ಕೊನೆಯ ವರ್ಕಿಂಗ್ ಡೇ. ಜಾಗತಿಕ ಆರ್ಥಿಕ ಮುಗ್ಗಟ್ಟಿನ ಮಧ್ಯೆ, ಮೂರು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿಕೊಂಡ ರಘುರಾಂ ರಾಜನ್, ದೇಶದ ಹಣದುಬ್ಬರದ ವಿಚಾರದಲ್ಲಿ ತೆಗೆದುಕೊಂಡ ಕೆಲವೊಂದು ಕಠಿಣ ನಿರ್ಧಾರಗಳು ವ್ಯಾಪಕ ಚರ್ಚೆಗೊಳಗಾಗಿದ್ದವು. (ಆರ್ಬಿಐ ಗವರ್ನರ್ ಆಗಿ ಊರ್ಜಿತ್ ಪಟೇಲ್) ರಿಸರ್ವ್ ಬ್ಯಾಂಕಿನ್ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಚರ್ಚಿತ ಗವರ್ನರ್ ಆಗಿರುವ ರಘುರಾಂ ರಾಜನ್ ಅವರನ್ನು ಬ್ಯಾಂಕಿನ ಸಹದ್ಯೋಗಿಗಳು, ಕಲರ್ ಫುಲ್ ಆಗಿ ಭಾನುವಾರ ಬೀಳ್ಕೊಟ್ಟಿದ್ದಾರೆ. ಆರ್ಬಿಐನ ನೂತನ ಗವರ್ನರ್ ಆಗಿ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕರಿಸಲಿದ್ದಾರೆ….

Continue Reading ...

ರಿಸರ್ವ್ ಬ್ಯಾಂಕ್‌ಗೆ ಹೊಸ ಸಾರಥಿ ಉರ್ಜಿತ್ ಪಟೇಲ್

ರಿಸರ್ವ್ ಬ್ಯಾಂಕ್‌ಗೆ ಹೊಸ ಸಾರಥಿ ಉರ್ಜಿತ್ ಪಟೇಲ್

ನವದೆಹಲಿ, ಸೆಪ್ಟೆಂಬರ್, 05: ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ರಿಸರ್ವ್ ಬ್ಯಾಂಕಿನ 24ನೇ ಗವರ್ನರ್ ಎಂಬ ಶ್ರೇಯವನ್ನು ಪಡೆದುಕೊಂಡಿದ್ದಾರೆ. ರಘುರಾಂ ರಾಜನ್ ಅವರಿಂದ ತೆರವಾದ ಸ್ಥಾನವನ್ನು ಉರ್ಜಿತ್ ಪಟೇಲ್ ಅಲಂಕರಿಸಿದ್ದಾರೆ. 2013ರಿಂದ ಇಲ್ಲಿಯವರೆಗೆ ಉಪ ಗವರ್ನರ್ ಆಗಿ ಪಟೇಲ್ ಸೇವೆ ಸಲ್ಲಿಸುತ್ತಾ ಬಂದಿದ್ದರು. 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ 52 ವರ್ಷ ವಯಸ್ಸಿನ ಪಟೇಲ್ ಅವರು ಆರ್ ಬಿಐ ಡೆಪ್ಯುಟಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಬಡ್ತಿ ಸಿಕ್ಕಿದೆ. ಆರ್ ಬಿಐ ಗವರ್ನರ್ ಅವಧಿ ಮೂರು ವರ್ಷದ್ದಾಗಿದೆ. ಕೇಲ್ಕರ್ ಸಮಿತಿಯ ನೇರ ತೆರಿಗೆಗಳ ಕಾರ್ಯಪಡೆ, ನಾಗರಿಕ ಮತ್ತು ರಕ್ಷಣಾ ಸೇವೆ…

Continue Reading ...