ಗುರ್‍ಮೆಹರ್ ಕೌರ್‍ಗೆ ಇಂತಹ ಯಡವಟ್ಟು ಬೇಕಿತ್ತೇ ?

ಎಣ್ಣೆ-ಸೀಗೆಕಾಯಿಯಂತಿರುವ ಭಾರತ-ಪಾಕ್ ಸಂಬಂಧಗಳು ಸುಧಾರಿಸುತ್ತದೆಂಬುದು ದೂರದ ಮಾತು.  ಎರಡೂ ದೇಶಗಳ ಕಾದಾಟ ಎಂದೂ ಮುಗಿಯದ ಕಥೆ.  ಆಗಾಗ್ಗೆ ಭಾರತದ ಬಗ್ಗೆ ಪಾಕ್ ಕ್ಯಾತೆ ತೆಗೆಯುವುದು ಸಾಮಾನ್ಯ ಸಂಗತಿ.  ಪದೇ ಪದೇ ದೇಶದ ಗಡಿಭಾಗದಲ್ಲಾಗಲೀ ಅಥವಾ ಇನ್ಯಾವುದೇ ಮಹಾನಗರಗಳಲ್ಲಿ ಸಂಭವಿಸುವ ಬಾಂಬ್ ಸ್ಪೋಟ ಸೇರಿದಂತೆ ಘನಘೋರ ಕೃತ್ಯಗಳಲ್ಲಿ ಪಾಕ್ ಕೈವಾಡ ಸ್ಪಷ್ಟವಾಗಿದ್ದರೂ ಈವರೆವಿಗೂ ಏನೂ ಮಾಡಲಾಗದಿರುವುದು ನಮ್ಮ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡುತ್ತದೆ.  ಇನ್ನು ಗಡಿಭಾಗದಲ್ಲಿ ಪಾಕ್ ತಾನು ಹೇಳಿದಂತೆ ನಡೆದುಕೊಳ್ಳದೆ ಉಲ್ಲಂಘಿಸಿದ ಕದನವಿರಾಮಗಳಿಗೆ ಲೆಕ್ಕವಿಲ್ಲ.  ಶತೃ ದೇಶವೆಂದೇ ಬಿಂಬಿತವಾಗಿರುವ ಪಾಕ್ ವಿಚಾರದಲ್ಲಿ ದೇಶಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಹುತಾತ್ಮ ಭಾರತೀಯ ಸೈನಿಕರ ದಂಡೇ ಇದೆ. ಬಲಿಷ್ಠ ರಾಷ್ಟ್ರ ಭಾರತ ಇಂದಿಗೂ ಬಲಿಷ್ಠವಲ್ಲದ ಪಾಕ್‍ನೊಂದಿಗೆ  ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದೆಂಬ…

Continue Reading ...

ಕೊನೆ ಕ್ಷಣದಲ್ಲಿ ಹೈ ಕಮಿಷನರ್‌ ಕಾರ್ಯಕ್ರಮ ರದ್ದು:ಪಾಕ್‌ ರಾಜತಾಂತ್ರಿಕ ಬಸಿತ್‌ಗೆ ಭಾರತ ಸಮನ್ಸ್

ಕೊನೆ ಕ್ಷಣದಲ್ಲಿ ಹೈ ಕಮಿಷನರ್‌ ಕಾರ್ಯಕ್ರಮ ರದ್ದು:ಪಾಕ್‌ ರಾಜತಾಂತ್ರಿಕ ಬಸಿತ್‌ಗೆ ಭಾರತ ಸಮನ್ಸ್

ಪಾಕಿಸ್ತಾನಕ್ಕೆ ಭಾರತದ ಹೈಕಮಿಷನರ್‌ ಆಗಿರುವ ಗೌತಮ್‌ ಬಂಬವಾಲೆ ಅವರ ನಿಗದಿತ ಕರಾಚಿಯ ಭಾಷಣವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿರುವ ಪಾಕ್‌ನ ಕ್ರಮವನ್ನು ಖಂಡಿಸಿರುವ ಭಾರತವು ಆ ರಾಷ್ಟ್ರದ ರಾಜತಾಂತ್ರಿಕ ಅಬ್ದುಲ್‌ ಬಸಿತ್‌ ಅವರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ವಿರೋಧಿಸಿ ಬಂಬವಾಲೆ ಅವರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ಚೇಂಬರ್‌ ಆಫ್‌ ಕಾಮರ್ಸ್‌ನ ಸಭೆಯಲ್ಲಿ ಮಂಗಳವಾರ ಅವರು ಮಾಡಬೇಕಿದ್ದ ಭಾಷಣವನ್ನು ರದ್ದುಗೊಳಿಸಲಾಗಿದೆ. ಇದು ಸಂಘಟಕರು ಮಾಡಿರುವ ಬಹು ದೊಡ್ಡ ಅಗೌರವ. ಕಾರ್ಯಕ್ರಮ ರದ್ದುಪಡಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಜಮ್ಮುಮತ್ತು ಕಾಶ್ಮೀರದಲ್ಲಿ ಎರಡು ತಿಂಗಳಿಂದ ಹಿಂಸಾಚಾರ ನಡೆಯುತ್ತಿದ್ದು, ಪಾಕ್‌ ನಿರಂತರವಾಗಿ ಪ್ರತಿಕ್ರಿಯಿಸುವುದನ್ನು ಸಭೆಯಲ್ಲಿ ಭಾಗವಹಿಸುವ ಮೊದಲು ಕರಾಚಿಯಲ್ಲಿ ಬಂಬವಾಲೆ ಖಂಡಿಸಿದ್ದರು….

Continue Reading ...