Weight Lifting : ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತದ ಮೀರಾಬಾಯಿ ಚಾನು

Weight Lifting : ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತದ ಮೀರಾಬಾಯಿ ಚಾನು

ಭಾರತದ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ ಅಮೇರಿಕದ ಅನಹೀಂ ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಬರೋಬ್ಬರಿ ಎರಡು ದಶಕಗಳ ನಂತರ ಭಾರತಕ್ಕೆ ವೇಟ್ ಲಿಫ್ಟಿಂಗ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಒಲಿದಿದೆ. 48 ಕೆ.ಜಿ ವಿಭಾಗದ ಮಹಿಳೆಯರ ಚಾಂಪಿಯನ್ಷಿಪ್ ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು 85, 109 ಹಾಗೂ 194 ಕೆ.ಜಿ ಭಾರವನ್ನು ಎತ್ತಿ ಬಂಗಾರವನ್ನು ತಮ್ಮದಾಗಿಸಿಕೊಂಡರು. ಈ ಮೊದಲು 1994 ಹಾಗೂ 1995 ರಲ್ಲಿ ಕರ್ಣಂ ಮಲ್ಲೇಶ್ವರಿ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಆಂದ್ರಪ್ರದೇಶದ ಕರ್ಣಂ ಮಲ್ಲೇಶ್ವರಿ 2000ನೇ…

Continue Reading ...

Badminton : ಹಾಂಕಾಂಗ್ ಸೂಪರ್ ಸಿರೀಸ್ ಸೆಮಿಫೈನಲ್ ತಲುಪಿದ ಸಿಂಧು

Badminton : ಹಾಂಕಾಂಗ್ ಸೂಪರ್ ಸಿರೀಸ್ ಸೆಮಿಫೈನಲ್ ತಲುಪಿದ ಸಿಂಧು

ಭಾರತದ ಬ್ಯಾಡ್ಮಿಂಟನ್ ತಾರೆ ಆಟಗಾರ್ತಿ ಪಿ.ವಿ ಸಿಂಧು ಹಾಂಕಾಂಗ್ ಓಪನ್ ಸೂಪರ್ ಸಿರೀಸಿನ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನಿನ ಅಕಾನೆ ಯಾಮಾಗುಚಿ ವಿರುದ್ಧ 21-12, 21-19 ಪಾಯಿಂಟ್ ಗಳಿಂದ ಜಯಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ವಿಶ್ವದ 2ನೇ ಶ್ರೇಂಯಾಂಕಿತ ಆಟಗಾರ್ತಿ ಸಿಂಧು 5 ನೇ ಶ್ರೇಯಾಂಕಿತ ಆಟಗಾರ್ತಿ ಯಾಮಾಗುಚಿಯ ನಡುವಿನ ಈ ಪಂದ್ಯ ಒಟ್ಟು 37 ನಿಮಿಷ ನಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡಿನ ರಚನಾಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ 6ನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿಯಾದ ರಚನಾಕ್ ಇಂಟನಾನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಷೆಲ್ ಲೀ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.

Continue Reading ...

FootBall : 5ನೇ ಬಾರಿಗೆ Ballon d’Or ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೋ ರೊನಾಲ್ಡೊ

FootBall : 5ನೇ ಬಾರಿಗೆ Ballon d’Or ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೋ ರೊನಾಲ್ಡೊ

ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ, ಕ್ರಿಸ್ಟಿಯಾನೋ ರೊನಾಲ್ಡೊ 5ನೇ ಬಾರಿಗೆ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಹಾಗೂ ನೆಯ್ಮರ್ ಜೂನಿಯರ್ ಅವರನ್ನು ಹಿಂದಿಕ್ಕಿದ ರೊನಾಲ್ಡೊ, ಪ್ರಶಸ್ತಿ ಜಯಿಸಿದ್ದಾರೆ. ಇದಕ್ಕೂ ಮುಂಚೆ ರೊನಾಲ್ಡೊ 2008, 2013, 2014, 2016 ರ ಸಾಲಿನ Ballon d’Or ಪ್ರಶಸ್ತಿ ಗೆದ್ದಿದ್ದರು. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಕೂಡ 5 ಬಾರಿ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಪ್ಯಾರಿಸ್ ನ ಐಫೆಲ್ ಟಾವರ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೊನಾಲ್ಡೊ, ‘ ಸಹಜವಾಗಿಯೇ ನನಗೆ ಇದರಿಂದ ಖುಷಿಯಾಗಿದೆ. ಪ್ರತಿ ವರ್ಷವೂ ನಾನು ಇದನ್ನು ಇದಿರು ನೋಡುತ್ತೇನೆ. ಕಳೆದ ವರ್ಷ ಟ್ರೋಫಿಗಳನ್ನು ಗೆದ್ದಿದ್ದು, ಈ ಪ್ರಶಸ್ತಿ ದೊರೆಯಲು ಕಾರಣವಾಯಿತು….

Continue Reading ...

Hockey world league : ಸೆಮಿಫೈನಲ್ ನಲ್ಲಿ ಅರ್ಜೆಂಟೀನಾಗೆ ಶರಣಾದ ಭಾರತ

Hockey world league : ಸೆಮಿಫೈನಲ್ ನಲ್ಲಿ ಅರ್ಜೆಂಟೀನಾಗೆ ಶರಣಾದ ಭಾರತ

ಓರಿಸ್ಸಾ ರಾಜಧಾನಿ ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಶುಕ್ರವಾರ ನಡೆದ ಹಾಕಿ ವರ್ಲ್ಡ್ ಲೀಗ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅರ್ಜೆಂಂಟೀನಾ ತಂಡದೆದುರು 0-1 ಅಂತರದ ಸೋಲನುಭವಿಸಿದೆ. ಈ ಮೂಲಕ ಫೈನಲ್ ತಲುಪುವ ಆತಿಥೇಯ ಭಾರತ ತಂಡದ ಕನಸು ಈಡೇರಲಿಲ್ಲ. ಅರ್ಜೆಂಟೀನಾ ಪರವಾಗಿ ಗೊನಜಾಲೋ ಪೆಲಟ್ ಪಂದ್ಯದ 17ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಭಾರತದ ನಾಯಕ ಮನಪ್ರೀತ್ ಸಿಂಗ್ 22 ನೇ ನಿಮಷದಲ್ಲಿ ಹಳದಿ ಕಾರ್ಡ್ ತೋರಿಸಲಾಯಿತು. ಪಂದ್ಯದ ಕೊನೆಯ ಹಂತದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸದರೂ, ಅರ್ಜೆಂಟೀನಾ ತಂಡದ ರಕ್ಷಣಾತ್ಮಕ ಆಟದಿಂದಾಗಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಸೋಲಿಸಿದ್ದ ಭಾರತ ಸೆಮಿಫೈನಲ್ ತಲುಪಿತ್ತು. ಭಾರತ ರವಿವಾರ ಕಂಚಿನ ಪದಕಕ್ಕಾಗಿ ಎರಡನೇ…

Continue Reading ...

Hockey World League : ಜರ್ಮನಿಯನ್ನು ಸೋಲಿಸಿ ಕಂಚು ಗೆದ್ದ ಭಾರತ

Hockey World League : ಜರ್ಮನಿಯನ್ನು ಸೋಲಿಸಿ ಕಂಚು ಗೆದ್ದ ಭಾರತ

ಹಾಕಿ ವರ್ಲ್ಡ್ ಲೀಗ್ ಫೈನಲ್ ‘ ಟೂರ್ನಿಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ. ರವಿವಾರ ಓರಿಸ್ಸಾ ರಾಜಧಾನಿ ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ, ಜರ್ಮನಿಯನ್ನು 2-1 ಅಂತರದಿಂದ ಮಣಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತದ ಪರವಾಗಿ ಎಸ್ ವಿ ಸುನಿಲ್, ಪಂದ್ಯದ 21 ನೇ ನಿಮಿಷದಲ್ಲಿ ಹಾಗೂ ಹರ್ಮನ್ ಪ್ರೀತ್ ಸಿಂಗ್ 54 ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಜರ್ಮನಿ ಪರವಾಗಿ ಮಾರ್ಕ್ ಅಪೆಲ್ 36ನೇ ನಿಮಷದಲ್ಲಿ ಗೋಲ್ ದಾಖಲಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿ ಸೆಮಿಸ್ ತಲುಪಿತ್ತು. ಆದರೆ ಸೆಮಿಫೈನಲ್ ನಲ್ಲಿ ಭಾರತ ಅರ್ಜೆಂಟೀನಾ ತಂಡಕ್ಕೆ ಶರಣಾಗಿತ್ತು.

Continue Reading ...

ಮ್ಯಾಕ್ಸ್ ವೆಲ್ ಆರ್ಭಟ, ಆಸೀಸ್ ನಿಂದ ವಿಶ್ವ ದಾಖಲೆ ಮೊತ್ತ!

ಮ್ಯಾಕ್ಸ್ ವೆಲ್ ಆರ್ಭಟ, ಆಸೀಸ್ ನಿಂದ ವಿಶ್ವ ದಾಖಲೆ ಮೊತ್ತ!

ಪಲ್ಲಕೆಲೆ(ಶ್ರೀಲಂಕಾ), ಸೆ.06: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮ್ಯಾಕ್ಸ್ ವೆಲ್ 65 ಎಸೆತಗಳಲ್ಲಿ ಅಜೇಯ 145 ರನ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವದಾಖಲೆ ಮೊತ್ತ ದಾಖಲಿಸಿದೆ. 20 ಓವರ್ ಗಳಲ್ಲಿ 263/3 ಗಳಿಸಿದೆ. ಪಂದ್ಯದ ಸ್ಕೋರ್ ಕಾರ್ಡ್ ಮ್ಯಾಕ್ಸ್ ವೆಲ್ ಅವರು 9 ಸಿಕ್ಸ್ ಹಾಗೂ 14 ಬೌಂಡರಿ ಇದ್ದ 145 ರನ್ ಗಳಿಸಿದ್ದಲ್ಲದೆ, ಆಸ್ಟ್ರೇಲಿಯಾ ತಂಡ ವಿಶ್ವ ದಾಖಲೆ ನಿರ್ಮಿಸಲು ನೆರವಾದರು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಶ್ರೀಲಂಕಾ ಪಡೆ 20 ಓವರ್ ಗಳಲ್ಲಿ 178/9 ಸ್ಕೋರ್ ಮಾಡಿ ಶರಣಾಗಿದೆ. 1st T20I: Glenn Maxwell smashes 145* as Australia post world record 263/3 ಇದಕ್ಕೂ ಮುನ್ನ…

Continue Reading ...