ಬಾಮೈದನಿಗಾಗಿ “Love ರಾತ್ರಿ” ಮಾಡಲು ರೆಡಿಯಾದ ಸಲ್ಮಾನ್ ಖಾನ್

salman-khanಮುಂಬೈ : ಈಗಾಗಲೆ ಬಾಲಿವುಡ್‌ಗೆ ಕತ್ರಿನಾ ಕೈಫ್‌, ಸೊನಾಕ್ಷಿ ಸಿನ್ಹಾರಂತಹ ಪ್ರತಿಭೆಗಳನ್ನು ಬಾಲಿವುಡ್‌ ಪರಿಚಯಿಸಿದ್ದ ಸಲ್ಮಾನ್‌ ಖಾನ್‌, ಈಗ ತಮ್ಮ ಭಾಮೈದನನ್ನು ಸಿನಿಮಾ ಇಂಡಸ್ಟ್ರಿಗೆ ಕರೆತರಲು ಸಿದ್ದರಾಗಿದ್ದಾರೆ.

ಹೌದು ಸಲ್ಮಾನ್ ತಂಗಿ ಅರ್ಪಿತಾ ಅವರ ಪತಿ ಆಯುಷ್ ಶರ್ಮಾ ಅವರನ್ನ ಸಿನಿಮಾ ಇಂಡಸ್ಟ್ರಿಗೆ ಇಂಟ್ರಡ್ಯೂಸ್‌ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಲವ್‌ ರಾತ್ರಿ ಎಂಬ ಸಿನಿಮಾದಲ್ಲಿ ಆಯುಷ್ ಅಭಿನಯಿಸಲಿದ್ದು, ಈ ಬಗ್ಗೆ ಸಲ್ಮಾನ್ ಖಾನ್‌ ಟ್ವಿಟರ್‌ನಲ್ಲಿ ಆಯುಷ್‌ಗೆ ಶುಭಾಷಯ ಕೋರಿದ್ದಾರೆ.

ನನ್ನ ನಿರ್ಮಾಣದಲ್ಲಿ ಆಯುಷ್ ಶರ್ಮಾ ಅವರನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಲು ಸಂತೋಷವಾಗುತ್ತಿದೆ. ನಮ್ಮ ಬ್ಯಾನರ್‌ನ ಐದನೇ ಸಿನಿಮಾ ಇದಾಗಿದ್ದು, ಸಿನಿಮಾಗೆ ಅಭಿರಾಜ್ ಮಿನಾವಾಲಾ ನಿರ್ದೇಶನ ಮಾಡಲಿದ್ದಾರೆ ಎಂದು ಸಲ್ಮಾನ್ ಖಾನ್‌ ಹೇಳಿದ್ದಾರೆ.

ಇದಕ್ಕೆ ಆಯುಷ್ ಪ್ರತಿಕ್ರಿಯಿಸಿದ್ದು, ನಿಜಕ್ಕೂ ನನಗೆ ಈ ಅವಕಾಶ ಸಿಕ್ಕಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇಂತಹ ಅವಕಾಶ ಒದಗಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Leave a Comment