ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ಯೋಧರ ಬೆಂಬಲ

ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ಯೋಧರ ಬೆಂಬಲ

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ನಿವೃತ್ತ ಯೋಧರು ಬೆಂಬಲ ವ್ಯಕ್ತಪಡಿಸಿದ್ದಾರೆ.  ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿರುವ ನಿವೃತ್ತ ಯೋಧರು, ಕಳೆದ ಎಂಟು ವರ್ಷಗಳಿಂದ ಅಮೆರಿಕ ಸೇನೆ ಸರಿಯಾಗಿ ಪರಿಶೀಲನೆ ಮಾಡದ ಮತ್ತು ದುರ್ಬಲಗೊಳಿಸುವ ಬಜೆಟ್ ಕಡಿತಕ್ಕೆ ಒಳಗಾಗಿದೆ. ಪರಿಣಾಮವಾಗಿ ಸೇನೆ ಸಾಮರ್ಥ್ಯವನ್ನು ಕುಗ್ಗಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೇನೆಯ, ದೇಶದ ಭದ್ರತೆ ದೃಷ್ಟಿಯಿಂದ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುತ್ತೇವೆ ಎಂದು ನಿವೃತ್ತ ಯೋಧರು ತಿಳಿಸಿದ್ದಾರೆ.  ಡೊನಾಲ್ಡ್ ಟ್ರಂಪ್ ಗೆ ಅಮೆರಿಕ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ, ಗಡಿಯನ್ನು ಭದ್ರಗೊಳಿಸುವ ಬದ್ಧತೆ ಇದೆ ಎಂದು…

Continue Reading ...

ಕೊನೆ ಕ್ಷಣದಲ್ಲಿ ಹೈ ಕಮಿಷನರ್‌ ಕಾರ್ಯಕ್ರಮ ರದ್ದು:ಪಾಕ್‌ ರಾಜತಾಂತ್ರಿಕ ಬಸಿತ್‌ಗೆ ಭಾರತ ಸಮನ್ಸ್

ಕೊನೆ ಕ್ಷಣದಲ್ಲಿ ಹೈ ಕಮಿಷನರ್‌ ಕಾರ್ಯಕ್ರಮ ರದ್ದು:ಪಾಕ್‌ ರಾಜತಾಂತ್ರಿಕ ಬಸಿತ್‌ಗೆ ಭಾರತ ಸಮನ್ಸ್

ಪಾಕಿಸ್ತಾನಕ್ಕೆ ಭಾರತದ ಹೈಕಮಿಷನರ್‌ ಆಗಿರುವ ಗೌತಮ್‌ ಬಂಬವಾಲೆ ಅವರ ನಿಗದಿತ ಕರಾಚಿಯ ಭಾಷಣವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿರುವ ಪಾಕ್‌ನ ಕ್ರಮವನ್ನು ಖಂಡಿಸಿರುವ ಭಾರತವು ಆ ರಾಷ್ಟ್ರದ ರಾಜತಾಂತ್ರಿಕ ಅಬ್ದುಲ್‌ ಬಸಿತ್‌ ಅವರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ವಿರೋಧಿಸಿ ಬಂಬವಾಲೆ ಅವರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ಚೇಂಬರ್‌ ಆಫ್‌ ಕಾಮರ್ಸ್‌ನ ಸಭೆಯಲ್ಲಿ ಮಂಗಳವಾರ ಅವರು ಮಾಡಬೇಕಿದ್ದ ಭಾಷಣವನ್ನು ರದ್ದುಗೊಳಿಸಲಾಗಿದೆ. ಇದು ಸಂಘಟಕರು ಮಾಡಿರುವ ಬಹು ದೊಡ್ಡ ಅಗೌರವ. ಕಾರ್ಯಕ್ರಮ ರದ್ದುಪಡಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಜಮ್ಮುಮತ್ತು ಕಾಶ್ಮೀರದಲ್ಲಿ ಎರಡು ತಿಂಗಳಿಂದ ಹಿಂಸಾಚಾರ ನಡೆಯುತ್ತಿದ್ದು, ಪಾಕ್‌ ನಿರಂತರವಾಗಿ ಪ್ರತಿಕ್ರಿಯಿಸುವುದನ್ನು ಸಭೆಯಲ್ಲಿ ಭಾಗವಹಿಸುವ ಮೊದಲು ಕರಾಚಿಯಲ್ಲಿ ಬಂಬವಾಲೆ ಖಂಡಿಸಿದ್ದರು….

Continue Reading ...

ಗಣೇಶ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಗಣೇಶ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬೆಂಗಳೂರು, ಸೆಪ್ಟೆಂಬರ್, 05: ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ನರೇಂದ್ರ ಮೋದಿ “ಗಣಪತಿ ಬಪ್ಪಾ ಮೋರಯಾ, ದೇಶದ ಎಲ್ಲ ಜನರ ಮೇಲೆ ಗಣೇಶನ ಅನುಗ್ರಹವಿರಲಿ” ಎಂದು ಶುಭಾಶಯ ಕೋರಿದ್ದಾರೆ.[ಬೆಂಗಳೂರಿಗರೇ, ಗಣೇಶ ಮೂರ್ತಿ ಕೊಳ್ಳುವ ಮುನ್ನ ಗಮನಿಸಿ..] ದೇಶಾದಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು ಬೆಂಗಳೂರಿನಲ್ಲೂ ಹಬ್ಬದ ಆರ್ಭಟ ಜೋರಾಗಿದೆ. ವಿವಿಧ ಗಣೇಶ ದೇವಾಲಯದಲ್ಲಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.

Continue Reading ...
1 3 4 5