ಅತ್ಯಾಧುನಿಕ ಹವಾಮಾನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ!

ಅತ್ಯಾಧುನಿಕ ಹವಾಮಾನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ!

ಜಿಎಸ್ಎಲ್ ವಿ ಎಫ್ 05 ಉಡಾವಣಾ ವಾಹಕ ಮೂಲಕ ಇನ್ಸಾಟ್ 3ಡಿಆರ್ ಉಪಗ್ರಹ ಉಡಾವಣೆ ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಮತ್ತು ಮುಂದುವರೆದ ಹವಾಮಾನ ಉಪಗ್ರಹ ಇನ್ಸಾಟ್ 3ಡಿಆರ್ ಉಡಾವಣೆಗೆ ಸಜ್ಜಾಗಿದ್ದು, ಗುರುವಾರ ಉಡಾವಣೆಗೆ  ಸಮಯ ನಿಗದಿಪಡಿಸಲಾಗಿದೆ.ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ  ಮಾಡಲಾಗಿತ್ತು. ಇದಾದ ಬಳಿಕ 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಇದೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ  ಇಸ್ರೋ ಯಶಸ್ಸು ಸಾಧಿಸಿತ್ತು. ಇದರ ಮುಂದುವರೆದ ಭಾಗವಾಗಿ ನಾಳೆ ಇನ್ಸಾಟ್ 3ಡಿಆರ್ ಉಪಗ್ರಹವನ್ನು ಆಂಧ್ರ…

Continue Reading ...

ಹುವಾಯಿಯ ನೋವಾ ಮತ್ತು ನೋವಾ ಪ್ಲಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು

ಹುವಾಯಿಯ ನೋವಾ ಮತ್ತು ನೋವಾ ಪ್ಲಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು

ಈ ವರ್ಷದ ಅತ್ಯುತ್ತಮ ಫೋನುಗಳು ಎನ್ನಬಹುದಾದ ಮೇಟ್ 8 ಹಾಗೂ ಪಿ9 ಅನ್ನು ಬಿಡುಗಡೆಗೊಳಿಸಿದ ನಂತರ, ಹುವಾಯಿ ಕಂಪನಿಯು ಕೈಗೆಟುಕುವ ದರದ ಫೋನುಗಳನ್ನು ಬಿಡುಗಡೆಗೊಳಿಸಿದೆ.   ಓದಿರಿ: ಬಿಎಸ್‌ಎನ್‌ಎಲ್‌ನಿಂದ ರೂ.1 ಕ್ಕಿಂತ ಕಡಿಮೆಗೆ 1GB ಇಂಟರ್ನೆಟ್ ಆಫರ್ ಶೀಘ್ರದಲ್ಲಿ! ಬರ್ಲಿನ್ನಿನಲ್ಲಿ ನಡೆಯುತ್ತಿರುವ ಐ.ಎಫ್.ಎಯಲ್ಲಿ ಹುವಾಯಿ ನೋವಾ ಸರಣಿಯ ಸ್ಮಾರ್ಟ್ ಫೋನುಗಳನ್ನು ಘೋಷಿಸಿದೆ. ಈ ಸರಣಿಯಲ್ಲಿ – ನೋವಾ ಮತ್ತು ನೋವಾ ಪ್ಲಸ್ ಎಂಬ ಎರಡು ಫೋನುಗಳಿವೆ. ಎರಡೂ ಫೋನುಗಳು ಟೈಟಾನಿಯಂ ಗ್ರೇ, ಮಿಸ್ಟಿಕ್ ಸಿಲ್ವರ್, ಪ್ರೆಸ್ಟೀಜ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಕ್ಟೋಬರ್ ತಿಂಗಳಿನಿಂದ ಮಾರಾಟವಾಗಲಿದೆ. ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ ಹುವಾಯಿ ನೋವಾ…

Continue Reading ...

ಕಂಪ್ಯೂಟರ್‌ ಇಂಟರ್ನೆಟ್‌ ವೇಗ ಟ್ರ್ಯಾಕ್‌ ಮಾಡಲು ‘ನೆಟ್‌ ಮೀಟರ್‌’

ಕಂಪ್ಯೂಟರ್‌ ಇಂಟರ್ನೆಟ್‌ ವೇಗ ಟ್ರ್ಯಾಕ್‌ ಮಾಡಲು ‘ನೆಟ್‌ ಮೀಟರ್‌’

ಮನೆಯಲ್ಲಿ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಕೆಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಂಪ್ಯೂಟರ್‌ ಬಳಕೆ ಪ್ರಾರಂಭಿಸಿದ ಮೇಲೆ ಇಂಟರ್ನೆಟ್ ಬಳಸದೆ ಯಾರು ಸಹ ಇರಲಾರರು. ಇಂಟರ್ನೆಟ್ ಬಳಕೆ ಪ್ರಾರಂಭಿಸಿದ ಮೇಲೆ ಫೇಸ್‌ಬುಕ್‌, ಯೂಟ್ಯೂಬ್ ಓಪನ್‌ ಮಾಡದೇ ಇರಲು ಸಾಧ್ಯವೇ? ಖಂಡಿತ ಬಳಸುತ್ತೀರಿ. ಅಲ್ಲದೇ ಈಗಾಗಲೇ ಬಿಲಿಯನ್‌ಗಟ್ಟಲೇ ಬಳಕೆದಾರರು ಇಂಟರ್ನೆಟ್‌ ಬಳಸುತ್ತೀದ್ದೀರಿ. ಆದ್ರೆ ರಿಯಲ್‌ ಟೈಮ್‌ನಲ್ಲಿ ಇಂಟರ್ನೆಟ್ ವೇಗ ಕಂಪ್ಯೂಟರ್‌ನಲ್ಲಿ ಎಷ್ಟಿದೆ ಎಂಬುದನ್ನ ಟ್ರ್ಯಾಕ್‌ ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ ಅಲ್ವಾ. ಆಂಟಿವೈರಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ವೈರಸ್‌ ರಿಮೂವ್‌ ಹೇಗೆ? ಇಂಟರ್ನೆಟ್ ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಇಂಟರ್ನಟ್‌ನ ವೇಗ. ಯೂಟ್ಯೂಬ್‌ ವೀಡಿಯೋ ಕೆಲವೊಮ್ಮೆ ಹೆಚ್ಚು ಸಮಯ ಬಫರಿಂಗ್‌ ತೆಗೆದುಕೊಂಡರೆ ಅದು ಇಂಟರ್ನೆಟ್ ವೇಗ ಕುಸಿದಿದೆಯೋ ಅಥವಾ…

Continue Reading ...

ನನಸಾದ ಮಳೆಯ ಕನಸು

ನನಸಾದ ಮಳೆಯ ಕನಸು

ನಿರ್ಮಾಪಕ ಜಿ.ಗಂಗಾಧರ್‌ ಅವರು ‘ಮುಂಗಾರು ಮಳೆ-2’ ಸಿನಿಮಾದ ಶೀರ್ಷಿಕೆಯನ್ನು 2007ರಲ್ಲೇ ನೋಂದಾಯಿಸಿದ್ದರಂತೆ. ಒಂಬತ್ತು ವರ್ಷಗಳ ನಂತರ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಶರಣು ಹುಲ್ಲೂರು ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ ‘ಮುಂಗಾರು ಮಳೆ-2’ ಚಿತ್ರ. ಈ ಕುರಿತು ನಿರ್ಮಾಪಕ ಜಿ.ಗಂಗಾಧರ್‌ ಮಾತಾಡಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರ ರಿಲೀಸ್‌ ಆಗಿದ್ದು 2006ರಲ್ಲಿ. ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿದ ಚಿತ್ರವದು. ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅದು ತನ್ನ ಛಾಪು ಮೂಡಿಸಿತ್ತು. ಹತ್ತು ವರ್ಷಗಳ ನಂತರ ಮಳೆ ಮತ್ತೊಮ್ಮೆ ಮನರಂಜನೆಯ ತಂಪನ್ನೆರೆಯಲು ಬರುತ್ತಿದೆ. ಈ ಬಾರಿ ಅದು ಶಶಾಂಕ್‌ ನಿರ್ದೇಶನದಲ್ಲಿ ಸುರಿಯಲು ಸಜ್ಜಾಗಿದೆ. ನಿರ್ಮಾಪಕರಿಗೆ ‘ಮುಂಗಾರು ಮಳೆ-2’ ಸಿನಿಮಾವನ್ನು ನಿರ್ಮಾಣ ಮಾಡಬೇಕು ಅನ್ನುವುದು ಇತ್ತೀಚಿನ…

Continue Reading ...

‘ದೊಡ್ಮನೆ’ ಅಂದ್ರೆ ಏನು.? ಸೂರಿ ಬಾಯ್ಬಿಟ್ಟ ದೊಡ್ಡ ಸೀಕ್ರೆಟ್ ಇಲ್ಲಿದೆ.!

‘ದೊಡ್ಮನೆ’ ಅಂದ್ರೆ ಏನು.? ಸೂರಿ ಬಾಯ್ಬಿಟ್ಟ ದೊಡ್ಡ ಸೀಕ್ರೆಟ್ ಇಲ್ಲಿದೆ.!

ದುನಿಯಾ ಸೂರಿ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ವರ್ಷದ ಹಿಂದೆ ‘ದೊಡ್ಮನೆ ಹುಡ್ಗ’ ಸೆಟ್ಟೇರಿತ್ತು. ಅಲ್ಲಿಂದ ಇಲ್ಲಿಯವರೆಗೂ ‘ದೊಡ್ಮನೆ ಹುಡ್ಗ’ ಚಿತ್ರದ ಕುರಿತು ಅನೇಕ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಆದ್ರೆ, ನಿರ್ದೇಶಕ ಸೂರಿ ಈ ಸಿನಿಮಾಗೆ ‘ದೊಡ್ಮನೆ ಹುಡ್ಗ’ ಅಂತ ಟೈಟಲ್ ಯಾಕಿಟ್ರು ಎಂಬ ಸತ್ಯ ಯಾರಿಗಾದರೂ ಗೊತ್ತಾ.? ಡಾ.ರಾಜ್ ‘ಅಭಿಮಾನಿಗಳೇ ದೇವರುಗಳು’ ಅಂತ್ಹೇಳ್ತಿದ್ರು. ಅದನ್ನ ಸ್ವಲ್ಪ ರೀಮಿಕ್ಸ್ ಮಾಡಿ ‘ದೊಡ್ಮನೆ ಹುಡ್ಗ’ ಚಿತ್ರದಲ್ಲಿ ‘ಅಭಿಮಾನಿಗಳೇ ನಮ್ಮನೆ ದೇವ್ರು..’ ಹಾಡು ಬರೆಸಿದ್ದಾರೆ ಸೂರಿ. [‘ದೊಡ್ಮನೆ ಹುಡ್ಗ’ ಟ್ರೈಲರ್ ನಲ್ಲಿ ಅದೆಷ್ಟು ವಿಶೇಷತೆಗಳಿವೆ ಗೊತ್ತಾ.?] ಹಾಗಾದ್ರೆ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಗೂ ‘ದೊಡ್ಮನೆ ಹುಡ್ಗ’ ಚಿತ್ರಕ್ಕೂ ಲಿಂಕ್ ಇದ್ಯಾ.? ಈ ಡೌಟ್ ನ ಕ್ಲಿಯರ್…

Continue Reading ...

ಲಾಸ್ ಏಂಜಲೀಸ್ ಗೆ ಶಿಫ್ಟ್, ವಿಚಾರವನ್ನು ತಳ್ಳಿ ಹಾಕಿದ ಪ್ರಿಯಾಂಕ

ಲಾಸ್ ಏಂಜಲೀಸ್ ಗೆ ಶಿಫ್ಟ್, ವಿಚಾರವನ್ನು ತಳ್ಳಿ ಹಾಕಿದ ಪ್ರಿಯಾಂಕ

ಇತ್ತೀಚಿನ ದಿನಗಳಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಬಾಲಿವುಡ್ ಗಿಂತ, ಜಾಸ್ತಿ ಹಾಲಿವುಡ್ ನಲ್ಲೇ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ, ಇನ್ನು ಮುಂದಿನ ದಿನಗಳಲ್ಲಿ ಪಿಗ್ಗಿ ಲಾಸ್ ಏಂಜಲೀಸ್ ನಲ್ಲಿ ನೆಲೆಸಲಿದ್ದಾರೆ ಎಂಬ ಗಾಸಿಬ್ ಬಾಲಿವುಡ್ ಅಂಗಳದಲ್ಲಿ ಹಬ್ಬಿತ್ತು. ಆದರೆ ಈ ಗಾಸಿಪ್ ಗಳಿಗೆ ನಟಿ ಪ್ರಿಯಾಂಕ ಚೋಪ್ರಾ ಅವರು ಖಡಕ್ ಆಗಿ ಸ್ಪಷ್ಟನೆ ನೀಡುವ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸದ್ಯಕ್ಕೆ ನನಗೆ ಲಾಸ್ ಏಂಜಲೀಸ್ ನಲ್ಲಿ ನೆಲೆಸುವ ಯಾವುದೇ ಯೋಜನೆಗಳಿಲ್ಲ’ ಎಂದು 34 ವರ್ಷದ ನಟಿ ಪ್ರಿಯಾಂಕ ಚೋಪ್ರಾ ಅವರು ತಿಳಿಸಿದ್ದಾರೆ.[ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ] ‘ನಾನು ಇಂತಹ ತಮಾಷೆ ಸುದ್ದಿಗಳನ್ನು ಆವಾಗವಾಗ ಕೇಳುತ್ತಾ ಇರುತ್ತೇನೆ. ಸದ್ಯಕ್ಕೆ…

Continue Reading ...

30 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ

30 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ

ಹೊಸದಿಲ್ಲಿ: ಬುಧವಾರ ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ದರ 450 ರೂ. ಏರಿಕೆಯಾಗಿದ್ದು, 31,550 ರೂ. ಮುಟ್ಟಿದೆ. ಇದು ಕಳೆದ 30 ತಿಂಗಳಲ್ಲಿ ಗರಿಷ್ಠ ದರವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಜ್ಯುವೆಲ್ಲರ್‌ಗಳ ಖರೀದಿ ಭರಾಟೆ ಮತ್ತು ಜಾಗತಿಕ ಪ್ರಭಾವದಿಂದ ದರ ಏರುಗತಿಯಲ್ಲಿದೆ. ಬೆಳ್ಳಿ ದರವು 1 ಕೆ.ಜಿಗೆ 1,016 ರೂ. ಹೆಚ್ಚಿದ್ದು, 47,000 ರೂ. ಮಟ್ಟವನ್ನು ಮುಟ್ಟಿದಂತಾಗಿದೆ. ದಿಲ್ಲಿಯಲ್ಲಿ ಬೆಳ್ಳಿ ದರ 47,425 ರೂ. ಇತ್ತು. ನಾಣ್ಯ ತಯಾರಕರು ಮತ್ತು ಇತರೆ ಉದ್ಯಮಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ಬೆಳ್ಳಿ ದರವೂ ಏರಿಕೆಯಾಗುತ್ತಿದೆ. ”ಸೆಪ್ಟೆಂಬರ್‌ನಲ್ಲಿ ಅಮೆರಿಕದ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆಗಳು ಕಡಿಮೆಯಾಗಿದ್ದು, ಇದು ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ. ಸುರಕ್ಷಿತ ಹೂಡಿಕೆ ಸ್ವರ್ಗಗಳಾದ ಚಿನ್ನದತ್ತ ಹೂಡಿಕೆದಾರರು ಗಮನ…

Continue Reading ...

ತಮಿಳುನಾಡಿಗೆ ನೀರು ವಿರೋಧಿಸಿ ಮುಂದುವರಿದ ಪ್ರತಿಭಟನೆ

ತಮಿಳುನಾಡಿಗೆ ನೀರು ವಿರೋಧಿಸಿ ಮುಂದುವರಿದ ಪ್ರತಿಭಟನೆ

ಮಂಡ್ಯದ ರೈತರ ಬೆಳೆಗೆ ಇಂದಿನಿಂದ ನೀರು ಬಿಡಲು ಸಿಎಂ ಸೂಚನೆ- ಮೈಸೂರು/ ಮಂಡ್ಯ/ಹಾಸನ/ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಮಂಡ್ಯ ಜಿಲ್ಲೆಯ ಹಳ್ಳಿಹಳ್ಳಿಯಲ್ಲೂ ಅದರ ಕಾವು ಕಾಣಿಸಿಕೊಂಡಿದೆ. ಈ ನಡುವೆ, ಮಂಡ್ಯ ಜಿಲ್ಲೆಯ ರೈತರ ಬೆಳೆಗಳಿಗೆ ಅಗತ್ಯ ನೀರು ಹರಿಸುವಂತೆ ಸಿಎಂ ಸಿದ್ದರಾಮಯ್ಯ ಜಲಸಂಪನ್ಮೂಲ ಇಲಾಖೆಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿಯವರ ಆದೇಶದ ಅನ್ವಯ ಗುರುವಾರ ಬೆಳಗ್ಗೆಯಿಂದಲೇ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಯಲಿದೆ. ಈ ಮೂಲಕ ಕಾವೇರಿ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಿರತರಾಗಿರುವ ಮಂಡ್ಯದ ರೈತರಿಗೆ ಸರಕಾರ ತುಸು ನೆಮ್ಮದಿಯ ಸುದ್ದಿ ನೀಡಿದಂತಾಗಿದೆ. ರಸ್ತೆ ತಡೆ, ಜಲಾಶಯಕ್ಕೆ ಮುತ್ತಿಗೆ ಯತ್ನ, ನದಿಗೆ ಧುಮುಕುವುದು, ಜಯಲಲಿತಾಗೆ ಧಿಕ್ಕಾರ, ರಸ್ತೆಯಲ್ಲಿಯೇ ಠಿಕಾಣಿ ಹೂಡಿ…

Continue Reading ...

899 ರುಪಾಯಿಗೆ ವಿಮಾನದಲ್ಲಿ ದೇಶ ಸುತ್ತುವ ಅವಕಾಶ

899 ರುಪಾಯಿಗೆ ವಿಮಾನದಲ್ಲಿ ದೇಶ ಸುತ್ತುವ ಅವಕಾಶ

ಬೆಂಗಳೂರು, ಸೆಪ್ಟೆಂಬರ್ 07 : ಅತಿ ಕಡಿಮೆ ವೆಚ್ಚದಲ್ಲಿ ದೇಶದ ಒಳಗೆ ಹಾರಾಟ ನಡೆಸುವ ಅವಕಾಶವನ್ನು ಏರ್ ಏಷ್ಯಾ ನಿಮ್ಮ ಮುಂದೆ ಇಡುತ್ತಿದೆ. ಕೇವಲ 899 ರು. ನೀಡಿದರೆ ಸಾಕು ವಿಮಾನ ಹಾರಾಟದ ಸವಿಯನ್ನು ಅನುಭವಿಸಿ ನಿಮ್ಮ ನೆಚ್ಚಿನ ಜಾಗಕ್ಕೆ ತೆರಳಲು ಸಾಧ್ಯ. ನೆನಪಿರಲಿ ಸೆಪ್ಟೆಂಬರ್ 11 ರ ಒಳಗೆ ಬುಕ್ ಮಾಡಿದವರಿಗೆ ಮಾತ್ರ ಸೌಲಭ್ಯ. ಬೆಂಗಳೂರು, ಜೈಪುರ, ಹೈದರಾಬಾದ್, ನವದೆಹಲಿ ಎಲ್ಲಿಗೆ ಪ್ರಯಾಣ ಮಾಡುವುದಿದ್ದರೂ ಕೇವಲ 899 ರು. ನೀಡಿದರೆ ಸಾಕು. ಮೇಕ್ ಮೈ ಟ್ರಿಪ್, ಯಾತ್ರಾ ಬಳಕೆ ಮಾಡಿಕೊಂಡು ಟಿಕೆಟ್ ಬುಕ್ ಮಾಡಬಹುದು

Continue Reading ...

RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು

RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು

ನವದೆಹಲಿ, ಸೆ 5: ತನ್ನ ನೇರ ಮತ್ತು ದಿಟ್ಟ ಅಭಿಪ್ರಾಯಗಳಿಗೆ ಹೆಸರಾಗಿರುವ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುರಾಂ ರಾಜನ್ ಅವರಿಗೆ ಕಚೇರಿಯಲ್ಲಿ ಭಾನುವಾರ (ಸೆ 4) ಕೊನೆಯ ವರ್ಕಿಂಗ್ ಡೇ. ಜಾಗತಿಕ ಆರ್ಥಿಕ ಮುಗ್ಗಟ್ಟಿನ ಮಧ್ಯೆ, ಮೂರು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿಕೊಂಡ ರಘುರಾಂ ರಾಜನ್, ದೇಶದ ಹಣದುಬ್ಬರದ ವಿಚಾರದಲ್ಲಿ ತೆಗೆದುಕೊಂಡ ಕೆಲವೊಂದು ಕಠಿಣ ನಿರ್ಧಾರಗಳು ವ್ಯಾಪಕ ಚರ್ಚೆಗೊಳಗಾಗಿದ್ದವು. (ಆರ್ಬಿಐ ಗವರ್ನರ್ ಆಗಿ ಊರ್ಜಿತ್ ಪಟೇಲ್) ರಿಸರ್ವ್ ಬ್ಯಾಂಕಿನ್ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಚರ್ಚಿತ ಗವರ್ನರ್ ಆಗಿರುವ ರಘುರಾಂ ರಾಜನ್ ಅವರನ್ನು ಬ್ಯಾಂಕಿನ ಸಹದ್ಯೋಗಿಗಳು, ಕಲರ್ ಫುಲ್ ಆಗಿ ಭಾನುವಾರ ಬೀಳ್ಕೊಟ್ಟಿದ್ದಾರೆ. ಆರ್ಬಿಐನ ನೂತನ ಗವರ್ನರ್ ಆಗಿ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕರಿಸಲಿದ್ದಾರೆ….

Continue Reading ...
1 2 3 4 5