ಸಮುದ್ರದಲ್ಲಿ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆ: ವಿಜ್ಞಾನಿಗಳ ಸಂಶೋಧನೆ

ಸಮುದ್ರದಲ್ಲಿ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆ: ವಿಜ್ಞಾನಿಗಳ ಸಂಶೋಧನೆ

ಲಂಡನ್‌, ನವೆಂಬರ್ 18 : ಸಮುದ್ರದಲ್ಲಿ ಹತ್ತು ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ಆಳದಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಬ್ರಿಟನ್‌ನ ನ್ಯೂಕ್ಯಾಸೆಲ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಪ್ಲಾಸ್ಟಿಕ್‌ ಈಗ ಸಾಗರದ ಅತ್ಯಂತ ಆಳಕ್ಕೂ ತಲುಪಿರುವುದು ಮಾತ್ರವಲ್ಲದೇ, ಅದು ಅಲ್ಲಿ ಜೀವಿಸುತ್ತಿರುವ ಪ್ರಾಣಿಗಳ ಹೊಟ್ಟೆ ಸೇರಿರುವುದನ್ನು ಸಂಶೋಧಕರು ಸಾಬೀತು ಪಡಿಸಿದ್ದಾರೆ. ‘ಮರಿಯಾನ, ಜಪಾನ್‌, ಇಝು–ಬೊನಿನ್‌, ಪೆರು–ಚಿಲಿ, ನ್ಯೂ ಹೆಬ್ರೈಡ್ಸ್‌ ಮತ್ತು ಕೆರ್ಮಡೆಕ್‌ನ ಆಳವಾದ ಕಂದಕ ಸೇರಿದಂತೆ ಪೆಸಿಫಿಕ್‌ ಮಹಾಸಾಗರದಲ್ಲಿ ಕಂಡು ಬರುವ ಚಿಪ್ಪುಜೀವಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಅಲಾನ್‌ ಜೇಮಿಸನ್‌ ತಿಳಿಸಿದ್ದಾರೆ.

Continue Reading ...

ಏಷ್ಯಾದ ಸೆಕ್ಸಿ ಮಹಿಳೆಯ ಪಟ್ಟ ಗಿಟ್ಟಿಸಿಕೊಂಡ ಬಾಲಿವುಡ್‌ ಬೆಡಗಿ ಪ್ರಿಯಾಂಕ ಛೋಪ್ರಾ

ಏಷ್ಯಾದ ಸೆಕ್ಸಿ ಮಹಿಳೆಯ ಪಟ್ಟ ಗಿಟ್ಟಿಸಿಕೊಂಡ ಬಾಲಿವುಡ್‌ ಬೆಡಗಿ ಪ್ರಿಯಾಂಕ ಛೋಪ್ರಾ

ಬಾಲಿವುಡ್‌ ಬೆಡಗಿ, ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಛೋಪ್ರಾ ಐದನೇ ಬಾರಿಗೆ ಏಷ್ಯಾದ ಸೆಕ್ಸಿ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈಸ್ಟರ್ನ್‌ ಐ ಎಂಬ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಪ್ರಿಯಾಂಕಾ ಏಷ್ಯಾದ ಸೆಕ್ಸಿ ಮಹಿಳೆ ಎಂದು ತಿಳಿದುಬಂದಿದೆ. ಈಸ್ಟರ್ನ್‌ ಐ ನಿಯತಕಾಲಿಕೆ ಪ್ರತೀ ವರ್ಷ ಸಮೀಕ್ಷೆ ನಡೆಸುತ್ತಿದ್ದು, ಕಳೆದ ಬಾರಿ ಏಷ್ಯಾದ ಸೆಕ್ಸಿ ಮಹಿಳೆ ಎಂಬ ಖ್ಯಾತಿಗೆ ದೀಪಿಕಾ ಪಡುಕೋಣೆ ಭಾಜನರಾಗಿದ್ದರು. ಆದರೆ ಈ ಬಾರಿ ದೀಪಿಕಾಗೆ ಮೂರನೇ ಸ್ಥಾನ ಸಿಕ್ಕಿದ್ದು, ನಿಯಾ ಶರ್ಮಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಿಯಾಂಕಾ ಛೋಪ್ರಾ ಹಾಲಿವುಡ್‌ನಲ್ಲಿ ರಿಯಾಲಿಟಿ ಶೋ ಹಾಗೂ ಬೇವಾಚ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಇದರಿಂದಾಗಿ ಪ್ರಿಯಾಂಕ ಜನರಿಗೆ ಹತ್ತಿರವಾಗಿದ್ದಾರೆ.

Continue Reading ...

Weight Lifting : ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತದ ಮೀರಾಬಾಯಿ ಚಾನು

Weight Lifting : ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತದ ಮೀರಾಬಾಯಿ ಚಾನು

ಭಾರತದ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ ಅಮೇರಿಕದ ಅನಹೀಂ ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಬರೋಬ್ಬರಿ ಎರಡು ದಶಕಗಳ ನಂತರ ಭಾರತಕ್ಕೆ ವೇಟ್ ಲಿಫ್ಟಿಂಗ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಒಲಿದಿದೆ. 48 ಕೆ.ಜಿ ವಿಭಾಗದ ಮಹಿಳೆಯರ ಚಾಂಪಿಯನ್ಷಿಪ್ ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು 85, 109 ಹಾಗೂ 194 ಕೆ.ಜಿ ಭಾರವನ್ನು ಎತ್ತಿ ಬಂಗಾರವನ್ನು ತಮ್ಮದಾಗಿಸಿಕೊಂಡರು. ಈ ಮೊದಲು 1994 ಹಾಗೂ 1995 ರಲ್ಲಿ ಕರ್ಣಂ ಮಲ್ಲೇಶ್ವರಿ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಆಂದ್ರಪ್ರದೇಶದ ಕರ್ಣಂ ಮಲ್ಲೇಶ್ವರಿ 2000ನೇ…

Continue Reading ...

Badminton : ಹಾಂಕಾಂಗ್ ಸೂಪರ್ ಸಿರೀಸ್ ಸೆಮಿಫೈನಲ್ ತಲುಪಿದ ಸಿಂಧು

Badminton : ಹಾಂಕಾಂಗ್ ಸೂಪರ್ ಸಿರೀಸ್ ಸೆಮಿಫೈನಲ್ ತಲುಪಿದ ಸಿಂಧು

ಭಾರತದ ಬ್ಯಾಡ್ಮಿಂಟನ್ ತಾರೆ ಆಟಗಾರ್ತಿ ಪಿ.ವಿ ಸಿಂಧು ಹಾಂಕಾಂಗ್ ಓಪನ್ ಸೂಪರ್ ಸಿರೀಸಿನ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನಿನ ಅಕಾನೆ ಯಾಮಾಗುಚಿ ವಿರುದ್ಧ 21-12, 21-19 ಪಾಯಿಂಟ್ ಗಳಿಂದ ಜಯಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ವಿಶ್ವದ 2ನೇ ಶ್ರೇಂಯಾಂಕಿತ ಆಟಗಾರ್ತಿ ಸಿಂಧು 5 ನೇ ಶ್ರೇಯಾಂಕಿತ ಆಟಗಾರ್ತಿ ಯಾಮಾಗುಚಿಯ ನಡುವಿನ ಈ ಪಂದ್ಯ ಒಟ್ಟು 37 ನಿಮಿಷ ನಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡಿನ ರಚನಾಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ 6ನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿಯಾದ ರಚನಾಕ್ ಇಂಟನಾನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಷೆಲ್ ಲೀ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.

Continue Reading ...

BIGGBOSS ಸುಂದರಿ ಸಂಜನಾಗೆ ಕೂಡಿಬಂತು ಕಂಕಣ ಭಾಗ್ಯ……..ವರನ್ಯಾರು ಗೊತ್ತೇ….?

BIGGBOSS ಸುಂದರಿ ಸಂಜನಾಗೆ ಕೂಡಿಬಂತು ಕಂಕಣ ಭಾಗ್ಯ……..ವರನ್ಯಾರು ಗೊತ್ತೇ….?

ಬೆಂಗಳೂರು : ಬಿಗ್‌ಬಾಸ್ ಖ್ಯಾತಿಯ ನಟಿ ಸಂಜನಾಗೆ ಕಂಕಣಬಲ ಕೂಡಿ ಬಂದಿದೆ. ಬಿಗ್‌ಬಾಸ್‌ ಸೀಸನ್‌ 4 ರ ಸ್ಪರ್ಧಿಯಾಗಿದ್ದ ಸಂಜನಾ ಹಾಗೂ ಭುವನ್‌ ಮಧ್ಯೆ ಲವ್‌ ನಡೆಯುತ್ತಿದೆ. ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳಿದ್ದು, ಇದಕ್ಕೆಲ್ಲ ಈಗ ತೆರೆ ಬಿದ್ದಿದೆ. ಸಂಜನಾ, ತಮ್ಮ ಬಹುಕಾಲದ ಗೆಳೆಯ ಗೌರವ್‌ ಅವರನ್ನು ವರಿಸಲಿದ್ದಾರಂತೆ. ಹೀಗಂತ ಸ್ವತಃ ಸಂಜನಾ ಹೇಳಿದ್ದಾರೆ. ಸದ್ಯದಲ್ಲೇ ನಮ್ಮಿಬ್ಬರ ನಿಶ್ಚಿತಾರ್ಥ ಸಹ ನಡೆಯಲಿದೆ ಎಂದು ಸಂಜನಾ ಹೇಳಿದ್ದಾರೆ. ಗೌರವ್‌ ರಾಯ್‌ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಖಾಸಗಿ ವಾಹಿನಿಯೊಂದರಲ್ಲಿ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್ ಆಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಗೌರವ್‌ ನನಗೆ ಮೂರು ವರ್ಷಗಳಿಂದ ಪರಿಚಯ. ಬಿಗ್‌ಬಾಸ್‌ ಮನೆಗೆ ಹೋಗುವ ಮುನ್ನ ತಮ್ಮ ಪ್ರೀತಿಯನ್ನು ನನಗೆ ಹೇಳಿದ್ದರು. ಬಿಗ್‌ಬಾಸ್‌ನಿಂದ ಬಂದ ಮೇಲೆ…

Continue Reading ...

WATCH : ‘ನನಗೆ ವಯಸ್ಸಾಯ್ತು ಅನ್ಕೋಬೇಡಿ’ : ಕನ್ನಡಿಗರಿಗೆ ಪತ್ರ ಬರೆದ ರೆಬೆಲ್‌ ಸ್ಟಾರ್‌ ಅಂಬರೀಶ್‌

WATCH : ‘ನನಗೆ ವಯಸ್ಸಾಯ್ತು ಅನ್ಕೋಬೇಡಿ’ : ಕನ್ನಡಿಗರಿಗೆ ಪತ್ರ ಬರೆದ ರೆಬೆಲ್‌ ಸ್ಟಾರ್‌ ಅಂಬರೀಶ್‌

ಬೆಂಗಳೂರು : ಅಂಬಿ ನಿನಗೆ ವಯಸ್ಸಾಯ್ತೋ ಹೆಸರಿನ ಸಿನಿಮಾದ ಮಹೂರ್ತ ಇತ್ತೀಚೆಗಷ್ಟೇ ನೆರವೇರಿದೆ. ಕಿಚ್ಚ ಸುದೀಪ್‌ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ನಟಸುತ್ತಿರುವ ಈ ಸಿನಿಮಾದ ಟೈಟಲ್‌ ಟೀಸರ್ ರಿಲೀಸ್‌ ಆಗಿದೆ. ಅಂಬರೀಶ್ ಅವರ ಧ್ವನಿಯಲ್ಲೇ ಈ ಟೀಸರ್ ಹೊರಬಂದಿರುವುದು ವಿಶೇಷ. ಅಲ್ಲದೆ ಎಲ್ಲಾ ಸಿನಿಮಾಗಳಂತೆ ಅಲ್ಲದೆ ವಿಭಿನ್ನ ರೀತಿಯಲ್ಲಿ ಟೀಸರ್‌ ಬಿಡುಗಡೆ ಮಾಡಲಾಗಿದೆ. ಅಂಬರೀಶ್ ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ಆ ಪತ್ರದಲ್ಲಿ ತಮ್ಮ ಹುಟ್ಟು, ಬಾಲ್ಯ, ಸಿನಿಮಾ, ಮದುವೆ, ರಾಜಕೀಯ ಜೀವನ….ಹೀಗೆ ತಮ್ಮ ಜೀವನ ಸಾಗಿ ಬಂದ ಹಾದಿಯನ್ನು ಹೇಳಿದ್ದಾರೆ. ಕೊನೆಗೆ ಇಷ್ಟೊತ್ತು ಅಮರನಾಥ್‌ ಆಗಿ ಮಾತನಾಡಿದೆ. ಈಗ ನಿಮ್ಮ ಪ್ರೀತಿಯ ಅಂಬಿಯಾಗಿ ಹೇಳ್ತಿದ್ದೀನಿ ಕೇಳಿ, ನೀವೆಲ್ಲ ಥಿಯೇಟರ್‌ಗೆ ಬಂದು ಆಶಿರ್ವಾದ ಮಾಡ…

Continue Reading ...

ಅಧ್ಯಕ್ಷ ಪಟ್ಟಕ್ಕೇರಿದ ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು

ಅಧ್ಯಕ್ಷ ಪಟ್ಟಕ್ಕೇರಿದ ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು

ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಯೇ ನನ್ನ ಮೊದಲ ಆಧ್ಯತೆ. ಜನರನ್ನು ಬಿಜೆಪಿ ವಿಭಜಿಸುತ್ತದೆ ಆದರೆ, ಕಾಂಗ್ರೆಸ್ ಪ್ರೀತಿಸುತ್ತದೆ” ಎಂದು ನೂತನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂಧ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಈವರೆಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿಯವರು ತಮ್ಮ ಪುತ್ರ ರಾಹುಲ್ ಗಾಂಧಿಗೆ ನವದೆಹಲಿಯಲ್ಲಿಂದು (ಡಿ.16) ಎಐಸಿಸಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಮಾತನಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

Continue Reading ...

TV9 ನಿರೂಪಕ “ರಂಭಾ” ವಿರುದ್ದ HDK ಲಂಚದ ಆರೋಪ : ಸತ್ಯ ಬಿಚ್ಚಿಡ್ತು screen shot

TV9 ನಿರೂಪಕ “ರಂಭಾ” ವಿರುದ್ದ HDK ಲಂಚದ ಆರೋಪ : ಸತ್ಯ ಬಿಚ್ಚಿಡ್ತು screen shot

ಬೆಂಗಳೂರು : ಟಿವಿ 9ನ ನಿರೂಪಕ ರಂಗನಾಥ್ ಭಾರದ್ವಾಜ್‌ ಅವರು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿಯವರಿಗೆ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಲ್ಲದೆ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಎಚ್‌ಡಿಕೆಯವರನ್ನು ಟಿವಿ 9 ಸಂವಾದಕ್ಕೆ ಆಹ್ವಾನಿಸಲಾಗಿದ್ದು, ಅಲ್ಲಿ ನಿರೂಪಕ ರಂಗನಾಥ್ ಭಾರದ್ವಾಜ್‌ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಎಚ್‌ಡಿಕೆ ಆರೋಪಿಸಿದ್ದರು. ಚಾನಲ್‌ ವಿರುದ್ದ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದು, ಎಲ್ಲೆಡೆ ವೈರಲ್‌ ಆಗಿತ್ತು. ಅಲ್ಲದೆ ಇಷ್ಟೆಲ್ಲ ನಡೆಯಲು ರಂಗನಾಥ್‌ ಭಾರದ್ವಾಜ್ ಕಾರಣ ಎಂದೂ ಆರೋಪಿಸಿದ್ದರು. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ರಂಗನಾಥ್ ಭಾರದ್ವಾಜ್‌ ತಮ್ಮ ಸ್ನೇಹಿತರೊಬ್ಬರಿಗೆ ಕುಮಾರಸ್ವಾಮಿಯವರ ವಿಡಿಯೊವನ್ನು ಸೆಂಡ್‌ ಮಾಡಿ ಅದರ ಕೆಳಗೆ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯ ಅಂತ್ಯ ..ನೋಡ್ತಾ ಇರು ಎಂದು…

Continue Reading ...

Whats app ಬಳಕೆದಾರರಿಗೊಂದು ಸಿಹಿಸುದ್ದಿ……ಏನದು…?

Whats app ಬಳಕೆದಾರರಿಗೊಂದು ಸಿಹಿಸುದ್ದಿ……ಏನದು…?

ವಾಷಿಂಗ್ಟನ್‌ : ವಾಟ್ಸ್‌ ಆ್ಯಪ್‌ನಲ್ಲಿ ಇತ್ತೀಚೆಗಷ್ಟೇ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್‌ ಮಾಡಿದರೆ ಅಡ್ಮಿನ್‌ ವಿರುದ್ದ ಕ್ರಮ ಕೈಗೊಂಡ ವಿಚಾರ ತಿಳಿದೇ ಇದೆ. ಆದರೆ ಈಗ ವಾಟ್ಸಾಪ್‌ ಹೊಸ ಅಧಿಕಾರವನ್ನು ಅಡ್ಮಿನ್‌ಗಳಿಗೆ ನೀಡಿದ್ದು, ಅವಹೇಳನಕಾರಿ ಸಂದೇಶಗಳು, ಪೋಸ್ಟ್‌ಗಳು, ಫೋಟೋಗಳನ್ನು ಕಳುಹಿಸುವವರನ್ನು ನಿರ್ಬಂಧಿಸುವ ಅಧಿಕಾರವನ್ನು ನೀಡಿದೆ. ವ್ಯಾಬೆಟ್‌ ಇನ್ಫೋ ವೆಬ್‌ಸೈಟ್‌ ಈ ಬಗ್ಗೆ ವರದಿ ಮಾಡಿದ್ದು, ವಾಟ್ಸಾಪ್‌ನ ಈ ಅಭಿವೃದ್ಧಿ ಕುರಿತಂತೆ ಪ್ರಯೋಗಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಇದನ್ನು ಪರಿಚಯಿಸಲಾಗುತ್ತದೆ ಎಂದಿದೆ. ರಿಸ್ಟ್ರಿಕ್ಟ್ ಗ್ರೂಪ್‌ ಎಂಬುದನ್ನು ಆ್ಯಕ್ಟಿವೇಟ್ ಮಾಡಲು ಗ್ರೂಪ್‌ ಅಡ್ಮಿನ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಗುಂಪಿನಿಂದ ಸದಸ್ಯನನ್ನು ನಿಷೇಧಿಸಿದ ಬಳಿಕ ಆತ ಮೆಸೇಜ್‌ಗಳನ್ನು ಓದಬಹುದು. ಆದರೆ ಆತ ಅದಕ್ಕೆ ರಿಪ್ಲೆ ಮಾಡಲು ಸಾಧ್ಯವಿಲ್ಲ. ಮೆಸೇಜ್‌ ಅಡ್ಮಿನ್ ಎಂಬ ಬಟನ್‌ ಬಳಸಿ…

Continue Reading ...

ಅಮೆರಿಕದಲ್ಲಿ ಟೈಗರ್‌ ಶಾರ್ಕ್ ದಾಳಿಗೆ ಮಂಗಳೂರು ಮೂಲದ ಮಹಿಳೆ ಬಲಿ

ಅಮೆರಿಕದಲ್ಲಿ ಟೈಗರ್‌ ಶಾರ್ಕ್ ದಾಳಿಗೆ ಮಂಗಳೂರು ಮೂಲದ ಮಹಿಳೆ ಬಲಿ

ವಾಷಿಂಗ್ಟನ್‌ ; ಅಮೆರಿಕಾದ ಕೋಸ್ಟಾರಿಕಾ ದ್ವೀಪದಲ್ಲಿ ಟೈಗರ್‌ ಶಾರ್ಕ್‌ ನಡೆಸಿದ ದಾಳಿಗೆ ಮಂಗಳೂರು ಮೂವದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ರೋಹಿನಾ ಭಂಡಾರಿ (49) ಎಂದು ಗುರುತಿಸಲಾಗಿದೆ. ಅಮೆರಿಕದ ಮ್ಯಾನ್‌ ಹಟನ್‌ನಲ್ಲಿ ಫೈನಾನ್ಸ್‌ – ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್ ಪ್ರೊಫೆಶನಲ್‌ ಆಗಿ ಕೆಲಸ ಮಾಡುತ್ತಿದ್ದ ರೋಹಿನಾ , ಪೆಸಿಪಿಕ್‌ ಸಾಗರದ ಕೋಸ್ಟಾರಿಕಾ ದ್ವೀಪಕ್ಕೆ ವಿಹಾರಕ್ಕೆಂದು ತೆರಳಿದ್ದರು. ಇವರು ತೆರಳುವ ಕೆಲ ಹೊತ್ತಿನ ಹಿಂದೆ ಮೂರು ಶಾರ್ಕ್‌ಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶಾರ್ಕ್‌ಗಳು ಬಂದಿದ್ದ ಜಾಗವನ್ನು ಗುರು ಮಾಡಿ ಸ್ಕ್ಯೂಬಾ ಡೈವಿಂಗ್‌ಗೆ ನಿಷೇಧ ಹೇರಲಾಗಿತ್ತು. ಆದರೆ ರೋಹಿನಾ ಹಾಗೂ ಅವರ ಸ್ನೇಹಿತರು ನೀರಿಗಿಳಿದಿದ್ದು, ಈ ವೇಳೆ ಶಾರ್ಕ್‌ ಅಟ್ಯಾಕ್‌ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ…

Continue Reading ...
1 2 3 5