ಎಲ್ಲರೂ ಡಾಕ್ಟರ್, ಇಂಜಿನಿಯರ್ ಆದರೆ `ಸಮಾಜ’ ದ ಗತಿಯೇನು ?

ಈಗಷ್ಟೇ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದೆ.  100 ಕ್ಕೆ 99 ವಿದ್ಯಾರ್ಥಿಗಳು “ನಾನು ಡಾಕ್ಟರ್ ಆಗಬೇಕು”, “ನಾನು ಇಂಜಿನಿಯರ್ ಆಗಬೇಕು” ಎಂದು ತಮ್ಮ ಅಭಿಪ್ರಾಯ ವ್ಯಕ್ತಿಪಡಿಸುತ್ತಿದ್ದಾರೆಯೇ ವಿನಃ ಬೇರೆ ವಿಭಾಗಗಳ್ಯಾವುವೂ ಅವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸವೇ ಸರಿ.  ಕಲಾ ವಿಭಾಗದ ಬಗ್ಗೆ ಎಂದಿನಂತೆ ನಿಕೃಷ್ಟ ಧೋರಣೆ ಮುಂದುವರಿದಿದೆ.  ಎಲ್ಲರೂ ಕೇವಲ ಡಾಕ್ಟರ್, ಇಂಜಿನಿಯರ್ ಆಗ ಬಯಸಿದರೆ ದೇಶದ ಭವಿಷ್ಯಕ್ಕೆ ಅರ್ಥವಿಲ್ಲ.  ನಾಗರೀಕ ಸಮಾಜಕ್ಕೆ ಕೇವಲ ಡಾಕ್ಟರ್, ಇಂಜಿನಿಯರ್ ಇದ್ದರೆ ಸಾಕೇ ? ಬೇರೆ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.  ಮನೆಗಳಲ್ಲಿ ತಮ್ಮ ಮಕ್ಕಳಿಗೆ ಪೋಷಕರು ಡಾಕ್ಟರ್ ಅಥವಾ ಇಂಜಿನಿಯರ್ ಆಗಲೇಬೇಕೆಂದು ಅವರ ತಲೆ ತುಂಬಿಬಿಟ್ಟಿರುತ್ತಾರೆ.  ಮಕ್ಕಳಿಗೆ ಇವೆರಡು ಇಲ್ಲದಿದ್ದರೆ…

Continue Reading ...

ಆತ್ಮಹತ್ಯೆ ಬೇಡ

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷಾ ಫಲಿತಾಂಶಗಳು ಬಂದ ಬೆನ್ನಲ್ಲೇ ಅನುತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ದಿನಕ್ಕೊಂದು ವರದಿಯಾಗುತ್ತಲೇ ಇವೆ. ದುರ್ಬಲ ಮನಸ್ಸಿನ  ಭವಿಷ್ಯದ ಕುಡಿಗಳು ಹೀಗೆ ಏಕಾಏಕಿ ಸಾವಿನ ಹಾದಿ ತುಳಿಯುವುದು ಸರಿಯಲ್ಲ.  ಯಾವುದೇ ವಿಷಯದಲ್ಲಿ ಕಡಿಮೆ ಅಂಕ ಬರಲಿ, ಇಲ್ಲವೇ ನಪಾಸಾಗಲೀ ಅದಕ್ಕೆ ಸಾವು ಮದ್ದಲ್ಲ. ಇದ್ದು ಸಾಧಿಸಬೇಕು. ಮಕ್ಕಳ ದುಡುಕು ನಿರ್ಧಾರದಿಂದ ತಮ್ಮ ಮಕ್ಕಳ ಮೇಲೆ ಹತ್ತಾರು ಕನಸುಗಳನ್ನು ಹೊತ್ತ ಪೋಷಕರ ಕನಸುಗಳು ಕನಸಾಗಿಯೇ ಉಳಿದುಬಿಡುತ್ತವೆ. ಕೊನೆವರೆಗೂ ಅವರಿಗೆ ಈ ಶೋಕ ಅರಗಿಸಿಕೊಳ್ಳಲಾಗದು.  ಇದು ಒಂದು  ರೀತಿ ವಿದ್ಯಾರ್ಥಿಗಳ ತಪ್ಪಾದರೆ ಮತ್ತೊಂದೆಡೆ ಅವರ ಆತ್ಮಹತ್ಯೆಗೆ ಪೋಷಕರೂ ಕಾರಣರಾಗುತ್ತಿದ್ದಾರೆ.  ಪ್ರತಿ ಪೋಷಕರು ತಮ್ಮ ಮಕ್ಕಳು ಅತಿ ಹೆಚ್ಚು ಅಂಕ ಗಳಿಸಬೇಕು, ಪ್ರಥಮ ರ್ಯಾಂಕ್ ಬರಬೇಕು…

Continue Reading ...

ಜಾಹೀರಾ`ಥೂ’

ಜಾಹೀರಾ`ಥೂ’

ಇದು ಕಲಿಯುಗಕ್ಕಿಂತ ಹೆಚ್ಚಾಗಿ ಜಾಹೀರಾತು ಯುಗ.  ಜಾಹೀರಾತು ಇಲ್ಲದೆ ಪ್ರಪಂಚವೇ ಇಲ್ಲವೆಂಬಂತಾಗಿಬಿಟ್ಟಿದೆ.  ಇನ್ನು ಟಿ.ವಿ.ಗಳು ಮನೆಯಲಂಕರಿಸಿದ ಮೇಲಂತೂ ಜಾಹೀರಾತುಗಳದ್ದು ರುದ್ರನರ್ತನ.  ಟಿ.ವಿ. ವೀಕ್ಷಕರಿಗೆ ಈ ಜಾಹೀರಾತುಗಳು ದೊಡ್ಡ ಕಿರಿಕಿರಿ. ಜಾಹೀರಾ‘ಥೂ’ಗಳ ಕೃಪಾಕಟಾಕ್ಷದಿಂದ ಒಂದೂವರೆ ಗಂಟೆ ಸಿನಿಮಾಗಳು ಅರ್ಧದಿನಕ್ಕೆ ಮೋಕ್ಷ ಕಾಣುತ್ತಿವೆ. ಬೆಳಿಗ್ಗೆ ತಿಂಡಿ ಮುಗಿಸಿ ಯಾವುದಾದರೊಂದು ವಾಹಿನಿಯಲ್ಲಿ ಒಂದು ಚಲನಚಿತ್ರ ನೋಡಲು ಕುಳಿತರೆ ಜಾಹೀರಾತು ಹಾವಳಿಯಿಂದ ಅದು ಮುಗಿಯುವಷ್ಟರಲ್ಲಿ ಊಟದ ಸಮಯವಾಗಿಬಿಟ್ಟಿರುತ್ತದೆ.   ಇಲ್ಲಿಯವರೆಗೂ ಚಲನಚಿತ್ರಗಳ ಮಧ್ಯೆ ಜಾಹೀರಾತುಗಳೋ ? ಜಾಹೀರಾತುಗಳ ಮಧ್ಯೆ ಚಲನಚಿತ್ರಗಳೋ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.  ಧಾರಾವಾಹಿಗಳ ವಿಚಾರಕ್ಕೆ ಬಂದರೆ ಮೊದಲೇ ಚಿರಂಜೀವಿಗಳೆಂಬ ಬಿರುದಾಂಕಿತ ಧಾರಾವಾಹಿಗಳು ಜಾಹೀರಾತುಗಳ ಪ್ರಭಾವದಿಂದ ಮುಂದಿನ ಜನ್ಮದಲ್ಲಿ ಅಂತ್ಯ ಕಂಡ್ರೆ ಅದು ನಮ್ಮೆಲ್ಲರ ಪುಣ್ಯ. ಇನ್ನು ಅರ್ಥವಿಲ್ಲದ, ವಿಚಿತ್ರವಾದ…

Continue Reading ...

ರಾಂಗ್ ನಂಬರ್ – 1

ಮಿಸ್ಡ್ ಕಾಲ್ ಬಂತು ಆ ಕಡೆಯಿಂದ ಯಾರು ಅಂದೆ ನೀವ್ಯಾರು ಮಾತಾಡೋದು ? ಅಂದ್ಲು ಈ ಕಡೆಯಿಂದ ನಾನು ಆ ಕಡೆಯಿಂದ ನೀವು ಅಂದೆ ಸಾರಿ… ಇದು ರಾಂಗ್‍ನಂಬರ್ ಅಂದ್ಲು ಪರ್ವಾಗಿಲ್ಲ ಮಾತಾಡೋದು ಸ್ಯಾರಿ ತಾನೆ ಅಂದೆ ಸ್ಯಾರಿ ಅಲ್ಲಾರೀ ಚೂಡಿದಾರ ಅಂದ್ಲು ನೀವು ಚೂಡಿದಾರ ಆದ್ರೆ ನಾನು ಉಡ್‍ದಾರ ಅಂದೆ ತುಂಬಾ ಮಾತಾಡ್ತೀರಲ್ಲ್ರೀ ಅಂದ್ಲು ಆಲ್ ಮೊಬೈಲ್‍ಗೆ ಫ್ರೀ ಅಂದೆ ನಿಮ್ ಮಾತಿಗೆ ಬೆಲೆನೇ ಇಲ್ವಲ್ರೀ ಅಂದ್ಲು ನನ್ ಮಾತಿಗೆ ಬೆಲೆ ಕಟ್ಟಕಾಗಲ್ಲ ಅಂದೆ ಹುಡುಗಿಯೊಡನೆ ಸಿಕ್ಕಾಪಟ್ಟೆ ಮಾತಾಡ್ತೀರಲ್ಲಾ ನಿಮ್ಮನೇಲಿ ಅಕ್ಕ-ತಂಗಿಯರಿಲ್ವಾ ಅಂದ್ಲು ಇಲ್ಲಾ ಊರಿಗೋಗಿದಾರೆ ಅಂದೆ ನಿಮ್ಮ ಹೆಸರೇನ್ರೀ ಅಂದೆ ಸುಮ ಅಂದ್ಲು ಮೊಬೈಲಲ್ಲೇ ಸುವಾಸನೆ ಬರ್ತಿದೀಯಲ್ಲಾ ಅಂದೆ ನಾಯಿ ತರ ಮೂಸೋ…

Continue Reading ...

ಹೈಜಾಕೇಶ್ವರ

ಹೈಜಾಕೇಶ್ವರ

ವಿದೇಶದಲ್ಲೊಂದು ಗಂಡಂದಿರು ತಮ್ಮ ಹೆಂಡತಿಯನ್ನು ಈ ಮಟ್ಟಕ್ಕೆ ಇಷ್ಟಪಡುತ್ತಾರಾ ಎಂದು ಅನುಮಾನ ಮೂಡುವಂತಹ ಘಟನೆ ನಡೆದಿದೆ.  ಬಿಟ್ಟು ಹೋದ ತನ್ನ ಪತ್ನಿಗಾಗಿ ಮಾನ ಬಿಟ್ಟು ವಿಮಾನ ಹೈಜಾಕ್ ಮಾಡಿದ್ದಾನೆ ಒಬ್ಬ ಮಹಾಶಯ.  ಆ ಮೂಲಕ ತನ್ನ ಪ್ರೀತಿ ಎಷ್ಟು ಎತ್ತರವೆಂದು ಜಗತ್ತಿಗೇ ಮನವರಿಕೆ ಮಾಡಿಕೊಟ್ಟಿದ್ದಾನೆ.  ಕೈರೋಗೆ ಹೊರಟಿದ್ದ ಏರ್‍ಬಸ್ ಅಪಹರಿಸಿ ತನ್ನ ಜೀರೋ ಸೈಜ್ ಪತ್ನಿ ಬೇಕೆಂದು ಹಠ ಹಿಡಿದಿದ್ದಾನೆ.  ತನ್ನ ಈ ಕೆಲಸಕ್ಕೆ ಯಾರು ಜಾಕ್ ಎತ್ತಿದ್ರೋ ಏನೋ ಅಂತೂ ಯಶಸ್ವಿಯಾಗಿ ವಿಮಾನ ಹೈಜಾಕ್ ಮಾಡಿದ್ದಾನೆ.  ದಿಕ್ಕುತಪ್ಪಿದ ಪತಿಯಿಂದಾಗಿ ಏರ್‍ಬಸ್ ಕೂಡ ದಿಕ್ಕು ತಪ್ಪಿದೆ.  ನೀರಿನ ಬಾಟಲಿಯೊಂದಿಗೆ ಜೀವವನ್ನೂ ಕೈಯಲ್ಲಿಡಿದುಕೊಂಡ ಪ್ರಯಾಣಿಕರಿಗೆ ಈ ಏರ್‍ಬಸ್ ಎ-320 ಗಿಂತ `ಟಿಕ್‍ಟ್ವಂಟಿ’ಯೇ ವಾಸಿಯೆನಿಸಿರಬೇಕು.  ಇನ್ನು ಪತ್ನಿಯಿಲ್ಲದೆ ಮನೆಯಲ್ಲೇ…

Continue Reading ...

ನಿಲ್ಲದ ಡೋನೇಷನ್ ಹಾವಳಿ

ಈಗಾಗಲೇ ಕೆಲವೆಡೆ ಶಾಲೆಗಳ ದಾಖಲಾತಿ ಪ್ರಾರಂಭವಾಗಿದ್ದು ಖಾಸಗಿ ಶಾಲೆಗಳು ಡೊನೇಷನ್ ಪಡೆಯಬಾರದೆಂಬ ಕಾನೂನಿದ್ದರೂ ಸದ್ದಿಲ್ಲದೆ ಡೊನೇಷನ್ ಪಡೆಯುತ್ತಾ ಹಗಲುದರೋಡೆ ನಡೆಸಿವೆ. ಎಲ್ಲಾ ರೀತಿಯ ಸೌಕರ್ಯಗಳು ದೊರೆತರೂ ಪೋಷಕರುಗಳಿಗೆ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಮನೋಭಾವ ಹೋಗಿಲ್ಲ. ಓದಬಲ್ಲ ಪ್ರತಿಭಾವಂತ ವಿದ್ಯಾರ್ಥಿ ಯಾವ ಶಾಲೆಯಲ್ಲಿದ್ದರೂ ಓದಬಲ್ಲನೆಂಬ ಸತ್ಯವನ್ನು ಪೋಷಕರು ಅರ್ಥೈಸಿಕೊಳ್ಳುವುದೇ ಇಲ್ಲ.  ಸರ್ಕಾರಿ ಶಾಲೆಗಳು ತುಂಬಿ ತುಳುಕುತ್ತಿರುವಾಗ ಅವರು ಅನಿವಾರ್ಯವಾಗಿ ಖಾಸಗಿ ಶಾಲೆಯತ್ತ ಹೊರಳಬೇಕಾಗುತ್ತದೆ.  ಇದೇ ಅವಕಾಶವನ್ನು ಖಾಸಗಿ ಶಾಲೆಗಳು ಯಶಸ್ವಿಯಾಗಿ ಬಳಸಿಕೊಂಡು ಪೋಷಕರನ್ನು ಡೊನೇಷನ್ ನೆಪದಲ್ಲಿ ಸುಲಿಯತೊಡಗುತ್ತವೆ. ಡೊನೇಷನ್ ಪಡೆದ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.  ತಮ್ಮ ಮಕ್ಕಳಿಗೆ ಪ್ರವೇಶ ದೊರೆಯುವುದಿಲ್ಲವೆಂಬ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ವಿರುದ್ಧ…

Continue Reading ...

ರಾಜ`ಹಿಂಸೆ’

ರಾಜ`ಹಿಂಸೆ’

ಹಾಗೂ ಹೀಗೂ ನಮ್ಮ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಸದಾ ಸುದ್ದಿಯಲ್ಲಿರುತ್ತವೆ.  “ಸಾರಿಗೆ (ಅನ್ನಕ್ಕಲ್ಲ) ಬಸ್ ಬಿದ್ದು ಸಾವು”, “ಬಸ್‍ನಲ್ಲೇ ಹೆರಿಗೆ”,  “ಸೆಕೆ ತಾಳಲಾರದೇ ನೀರಿಗಿಳಿಸಿದ ಬಸ್ ಚಾಲಕ”, “ಮರಕ್ಕೆ ಗುದ್ದಿ ಅಮರನಾದ ಚಾಲಕ” ಹೀಗೆ ಹತ್ತು ಹಲವು.  ಇದೇ ರೀತಿ ಮೊನ್ನೆ ವೋಲ್ವೋ ಬಸ್‍ಗಳಲ್ಲಿ ವೈಫೈ ಕನೆಕ್ಷನ್ ಅಳವಡಿಸುತ್ತಾರೆಂದು ಸುದ್ದಿ ಹಬ್ಬಿತ್ತು.  ಈ ವೋಲ್ವೋ ಬಸ್ ಹತ್ತಿದ್ರೆ ಗೊತ್ತಾಗುತ್ತೆ ನಮಗಿಂತಾ ಟಿಕೆಟ್‍ಗೇ ಹೆಚ್ಚು ಬೆಲೆಯೆಂದು.  ವೋಲ್ವೋಗಳಲ್ಲಿ  ಬಹುಶಃ ಕಲೆಕ್ಷನ್ ಕಮ್ಮಿಯಾಗಿರಬೇಕು ಅನಿಸುತ್ತೆ, ಹೀಗಾಗಿ ಯಾರೋ ವೈ.ಫೈ. ಕನೆಕ್ಷನ್ ಐಡಿಯಾ ಕೊಟ್ಟಿರಬೇಕು.  ಇತ್ತೀಚಿಗಂತೂ ಈ ವೋಲ್ವೋ ಬಸ್‍ಗಳಲ್ಲಿ ಟಿಕೆಟ್ ತೆಗೆದುಕೊಂಡರೆ ಅವರು ಯಾವುದಕ್ಕೆ ಟಿಕೆಟ್ ಕೊಟ್ಟರೆಂಬ ಅನುಮಾನ ಮೂಡುತ್ತದೆ.  ಒಂದು ಕೆಳಗಿಳಿಯಲು, ಇನ್ನೊಂದು ಮೇಲೇರಲು.  ಏಕೆಂದರೆ ಈಚೆಗೆ ಅಪಘಾತಗಳಲ್ಲಿ…

Continue Reading ...

ಮೌಢ್ಯ ನಿಲ್ಲಲಿ

ಗ್ರಾಮವೊಂದರಲ್ಲಿ ಜನ ಮಳೆಗಾಗಿ ಕತ್ತೆಗಳ ಮದುವೆ ಮಾಡಿಸುವ ಮೂಲಕ ಮತ್ತೊಂದು ಮೌಢ್ಯಾಚರಣೆ ನಡೆಸಿದ್ದಾರೆ.  ಈ ಅರ್ಥಹೀನ ಆಚರಣೆ ಖಂಡಿಸುವುದು ಬಿಟ್ಟು ಅನೇಕರು ಕತ್ತೆ ಮದುವೆಯಲ್ಲಿ ಸಂಭ್ರಮದಿಂದ ಭಾಗವಹಿಸಿದ್ದಾರೆ.  ಕೆಲಸವಿಲ್ಲದ ಜನ ಇಂತಹ ಮೌಢ್ಯಕ್ಕೆ ಶರಣಾಗಿ ಮೌಢ್ಯದ ಪರಮಾವಧಿ ತಲುಪಿರುವ ನಮ್ಮವರ ಅಜ್ಞಾನಕ್ಕೆ ಕೊನೆ ಇಲ್ಲವೆನಿಸುತ್ತದೆ.  ಈ ಅನರ್ಥ ಆಚರಣೆ ನಿಲ್ಲಬೇಕು. ಕತ್ತೆಗೂ ಮಳೆಗೂ ಯಾವುದೇ ಸಂಬಂಧವಿಲ್ಲ, ಯಾವುದೇ ವೈಜ್ಞಾನಿಕ ಆಧಾರವಿಲ್ಲ.  ಮಳೆಯ ನೆಪವೊಡ್ಡಿ  ಕತ್ತೆಗಳಂತಹ ಮುಗ್ಧ ಪ್ರಾಣಿಗಳನ್ನು ತÀಮ್ಮ ಹುಚ್ಚಾಟಕ್ಕೆ ತೊಡಗಿಸಿಕೊಳ್ಳುವುದು ಸರಿಯಲ್ಲ.  ಮಳೆಗೆ ಮೂಲ ಕಾರಣವಾದ ಪರಿಸರವನ್ನು ನಾವು ಎಷ್ಟರ ಮಟ್ಟಿಗೆ ದಿನೇ ದಿನೇ ಹಾಳುಮಾಡುತ್ತಿದ್ದೇವೆಂಬುದು ನಮ್ಮ ಕಣ್ಮುಂದೆಯೇ ಇದೆ. ಜನರಲ್ಲಿ ಪರಿಸರ ಬೆಳೆಸಿ, ಉಳಿಸಿದರೆ ಮಾತ್ರ ಮಳೆ ಸಾಧ್ಯ ಎಂಬ ಕನಿಷ್ಟ ಜ್ಞಾನದ…

Continue Reading ...

ಮಿಸ್ಟರ್ ‘ಗುಂಡ’ಣ್ಣನೊಂದಿಗೆ…

ಮಿಸ್ಟರ್ ‘ಗುಂಡ’ಣ್ಣನೊಂದಿಗೆ…

`ಗುಂಡ’ಣ್ಣೋರಿಗೆ ನಮಸ್ಕಾರ, ಏನಿದು ಕುಡುಕರಿಗೆ ಅನ್ಯಾಯ ? ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆಯಲ್ಲಾ ? `ಗುಂಡ’ಣ್ಣ : ನಮಸ್ಕಾರ ಗುರು ನಮಸ್ಕಾರ, ಅವ್ನಜ್ಜಿ ಯಾವ ಬೋಳಿ ಮಗ ಕೋರ್ಟಿಗೆ ಅರ್ಜಿ ಹಾಕಿದ್ನೇ ಏನೋ ? ಕುಡಿದು ಟೈಟಾಗಿ ಯಾವ ಕುಡುಕ ಜಡ್ಜ್‍ಗೆ “ನೀವು ನಮ್ಮದೇನೂ ಕಿತ್ಕೊಳಕ್ಕಾಗಲ್ಲ” ಎಂದು ರೇಗಿಸಿರಬೇಕು ಅನಿಸುತ್ತೆ,  ಕೊನೆಗೂ ನಮ್ಮ ‘ತವರು ಮನೆ’ನಾ ಕಿತ್ಕೊಂಡು ದೂರವಿಟ್ಟಿದ್ದಾರೆ. ಬಹಳ ಫೀಲ್ ಆಯ್ತು ಬ್ರದರ್.  ಆ ಫೀಲಲ್ಲಿ ಮತ್ತೆರಡು ಕ್ವಾಟ್ರು ಜಾಸ್ತಿ ಆಯ್ತು. ಈ ರೀತಿ ಸುಪ್ರೀಂ ನಮ್ಮಿಂದ ಬಾರ್ ಕಿತ್ಕೊಂಡ್ರೆ ಜಡ್ಜ್‍ಗಳಿಗೆ ಹೆತ್ತ ಮಕ್ಕಳಿಂದ ತಾಯಿ ಕಿತ್ಕೊಂಡಷ್ಟೇ ಪಾಪ ಬರುತ್ತೆ.  ಇನ್ನೊಂದ್ ವಿಷ್ಯ,…

Continue Reading ...

ನೋಟಾ ಬೇಕಿತ್ತೇ ?

ಇತ್ತೀಚಿಗೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ 1665 ನೋಟಾ ಮತಗಳು ಚಲಾವಣೆಯಾಗಿದ್ದು ಯಾವ ಅಭ್ಯರ್ಥಿಗೂ ಉಪಯೋಗಕ್ಕೆ ಬಾರದೇ ವ್ಯರ್ಥವಾಗಿ ಹೋಗಿವೆ.  ಇತ್ತೀಚಿನ ಚುನಾವಣೆಗಳಲ್ಲಿ `ನೋಟಾ’ (ನನ್ ಆಫ್ ದಿ ಎಬೋವ್) ಅಳವಡಿಸಿರುವುದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಮೂಡುತ್ತದೆ.   `ನೋಟಾ’ ಬದಲಿಗೆ ಕಡ್ಡಾಯ ಮತದಾನದತ್ತ ಚುನಾವಣಾ ಆಯೋಗ ಗಮನಹರಿಸಬೇಕಾಗಿದೆ.   ಏಕೆಂದರೆ ಒಬ್ಬ ಮತದಾರ ಯಾವುದೇ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರು ಸರಿಯಿಲ್ಲವೆಂದು ತೀರ್ಮಾನಿಸಿ `ನೋಟಾ’ ಒತ್ತಿದರೆ ಏನೂ ಪ್ರಯೋಜನವಿಲ್ಲ.  ಇದೂ ಕೂಡ ಇನ್ನೊಂದು ಬಗೆಯ ತಿರಸ್ಕøತ ಮತದಾನವಾಗಿದೆ.  ಮತದಾರನೊಬ್ಬ ತನಗೆ ಯಾರೂ ಸರಿಯಿಲ್ಲವೆಂದು `ನೋಟಾ’ ಒತ್ತಿದರೂ ಕೂಡ ಸ್ಪರ್ಧಿಸಿದವರಲ್ಲೊಬ್ಬ ಅಭ್ಯರ್ಥಿ ಗೆಲ್ಲಲೇಬೇಕಲ್ಲವೇ ? ಆಗ ಈತನ `ನೋಟಾ’ ದಿಂದ ಆದ ಪ್ರಯೋಜನವೇನು ?…

Continue Reading ...
1 2 3 8