ಏಷ್ಯಾದ ಸೆಕ್ಸಿ ಮಹಿಳೆಯ ಪಟ್ಟ ಗಿಟ್ಟಿಸಿಕೊಂಡ ಬಾಲಿವುಡ್‌ ಬೆಡಗಿ ಪ್ರಿಯಾಂಕ ಛೋಪ್ರಾ

priyanka-chopraಬಾಲಿವುಡ್‌ ಬೆಡಗಿ, ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಛೋಪ್ರಾ ಐದನೇ ಬಾರಿಗೆ ಏಷ್ಯಾದ ಸೆಕ್ಸಿ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಈಸ್ಟರ್ನ್‌ ಐ ಎಂಬ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಪ್ರಿಯಾಂಕಾ ಏಷ್ಯಾದ ಸೆಕ್ಸಿ ಮಹಿಳೆ ಎಂದು ತಿಳಿದುಬಂದಿದೆ.

ಈಸ್ಟರ್ನ್‌ ಐ ನಿಯತಕಾಲಿಕೆ ಪ್ರತೀ ವರ್ಷ ಸಮೀಕ್ಷೆ ನಡೆಸುತ್ತಿದ್ದು, ಕಳೆದ ಬಾರಿ ಏಷ್ಯಾದ ಸೆಕ್ಸಿ ಮಹಿಳೆ ಎಂಬ ಖ್ಯಾತಿಗೆ ದೀಪಿಕಾ ಪಡುಕೋಣೆ ಭಾಜನರಾಗಿದ್ದರು. ಆದರೆ ಈ ಬಾರಿ ದೀಪಿಕಾಗೆ ಮೂರನೇ ಸ್ಥಾನ ಸಿಕ್ಕಿದ್ದು, ನಿಯಾ ಶರ್ಮಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಿಯಾಂಕಾ ಛೋಪ್ರಾ ಹಾಲಿವುಡ್‌ನಲ್ಲಿ ರಿಯಾಲಿಟಿ ಶೋ ಹಾಗೂ ಬೇವಾಚ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಇದರಿಂದಾಗಿ ಪ್ರಿಯಾಂಕ ಜನರಿಗೆ ಹತ್ತಿರವಾಗಿದ್ದಾರೆ.

Leave a Comment