899 ರುಪಾಯಿಗೆ ವಿಮಾನದಲ್ಲಿ ದೇಶ ಸುತ್ತುವ ಅವಕಾಶ

ಬೆಂಗಳೂರು, ಸೆಪ್ಟೆಂಬರ್ 07 : ಅತಿ ಕಡಿಮೆ ವೆಚ್ಚದಲ್ಲಿ ದೇಶದ ಒಳಗೆ ಹಾರಾಟ ನಡೆಸುವ ಅವಕಾಶವನ್ನು ಏರ್ ಏಷ್ಯಾ ನಿಮ್ಮ ಮುಂದೆ ಇಡುತ್ತಿದೆ. ಕೇವಲ 899 ರು. ನೀಡಿದರೆ ಸಾಕು ವಿಮಾನ ಹಾರಾಟದ ಸವಿಯನ್ನು ಅನುಭವಿಸಿ ನಿಮ್ಮ ನೆಚ್ಚಿನ ಜಾಗಕ್ಕೆ ತೆರಳಲು ಸಾಧ್ಯ. ನೆನಪಿರಲಿ ಸೆಪ್ಟೆಂಬರ್ 11 ರ ಒಳಗೆ ಬುಕ್ ಮಾಡಿದವರಿಗೆ ಮಾತ್ರ ಸೌಲಭ್ಯ. ಬೆಂಗಳೂರು, ಜೈಪುರ, ಹೈದರಾಬಾದ್, ನವದೆಹಲಿ ಎಲ್ಲಿಗೆ ಪ್ರಯಾಣ ಮಾಡುವುದಿದ್ದರೂ ಕೇವಲ 899 ರು. ನೀಡಿದರೆ ಸಾಕು. ಮೇಕ್ ಮೈ ಟ್ರಿಪ್, ಯಾತ್ರಾ ಬಳಕೆ ಮಾಡಿಕೊಂಡು ಟಿಕೆಟ್ ಬುಕ್ ಮಾಡಬಹುದು

Leave a Comment