30 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ

ಹೊಸದಿಲ್ಲಿ: ಬುಧವಾರ ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ದರ 450 ರೂ. ಏರಿಕೆಯಾಗಿದ್ದು, 31,550 ರೂ. ಮುಟ್ಟಿದೆ. ಇದು ಕಳೆದ 30 ತಿಂಗಳಲ್ಲಿ ಗರಿಷ್ಠ ದರವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಜ್ಯುವೆಲ್ಲರ್‌ಗಳ ಖರೀದಿ ಭರಾಟೆ ಮತ್ತು ಜಾಗತಿಕ ಪ್ರಭಾವದಿಂದ ದರ ಏರುಗತಿಯಲ್ಲಿದೆ.

ಬೆಳ್ಳಿ ದರವು 1 ಕೆ.ಜಿಗೆ 1,016 ರೂ. ಹೆಚ್ಚಿದ್ದು, 47,000 ರೂ. ಮಟ್ಟವನ್ನು ಮುಟ್ಟಿದಂತಾಗಿದೆ. ದಿಲ್ಲಿಯಲ್ಲಿ ಬೆಳ್ಳಿ ದರ 47,425 ರೂ. ಇತ್ತು. ನಾಣ್ಯ ತಯಾರಕರು ಮತ್ತು ಇತರೆ ಉದ್ಯಮಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ಬೆಳ್ಳಿ ದರವೂ ಏರಿಕೆಯಾಗುತ್ತಿದೆ.

”ಸೆಪ್ಟೆಂಬರ್‌ನಲ್ಲಿ ಅಮೆರಿಕದ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆಗಳು ಕಡಿಮೆಯಾಗಿದ್ದು, ಇದು ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ. ಸುರಕ್ಷಿತ ಹೂಡಿಕೆ ಸ್ವರ್ಗಗಳಾದ ಚಿನ್ನದತ್ತ ಹೂಡಿಕೆದಾರರು ಗಮನ ನೀಡಲಿದ್ದಾರೆ,” ಎಂದು ಸದ್ಯದ ಟ್ರೆಂಡ್‌ ಅನ್ನು ತಜ್ಞರು ವಿಶ್ಲೇಷಿಸಿದ್ದಾರೆ.

Leave a Comment