ಸ್ವಿಸ್ ಬ್ಯಾಂಕ್

ಏನಿದು ಸ್ವಿಸ್ ಬ್ಯಾಂಕ್ ?
ಸ್ವಿಜರ್‍ಲ್ಯಾಂಡ್‍ನ ಪ್ರಮುಖ ಆದಾಯದ ಮೂಲಗಳೇ ಬ್ಯಾಂಕುಗಳು.  ಸ್ವಿಜರ್ ಲ್ಯಾಂಡ್‍ನಲ್ಲಿರುವ ಎಲ್ಲಾ ಬ್ಯಾಂಕುಗಳು “ಸ್ವಿಸ್ ಫೈನಾನ್ಶಿಯಲ್ ಮಾರ್ಕೆಟ್ ಸೂಪರ್‍ವೈಸರಿ ಅಥಾರಿಟಿ (ಎಫ್‍ಐಎನ್‍ಎಂಎ) ನಿಯಂತ್ರಣಕ್ಕೆ ಒಳಪಟ್ಟಿವೆ.  ಈ ಬ್ಯಾಂಕುಗಳನ್ನು ಸ್ವಿಸ್ ಬ್ಯಾಂಕ್‍ಗಳೆಂದು ಕರೆಯಲಾಗುತ್ತದೆ.  ಈ ಸ್ವಿಸ್ ಬ್ಯಾಂಕ್‍ಗಳು ಗ್ರಾಹಕರ ಖಾತೆಯ ಗೌಪ್ಯತೆ ಕಾಯ್ದುಕೊಳ್ಳುವಲ್ಲಿ ಹೆಸರುವಾಸಿಯಾಗಿವೆ.  ಹಾಗಾಗಿಯೇ ಬಹುತೇಕ ದೇಶದ ಜನರು ಈ ಬ್ಯಾಂಕ್‍ಗಳಲ್ಲಿ ಹಣ ಇಡುತ್ತಾರೆ.  ಮಧ್ಯಯುಗದಿಂದಲೂ ಸ್ವಿಸ್ ಬ್ಯಾಂಕುಗಳು ಗೌಪ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಹೆಸರು ವಾಸಿಯಾಗಿವೆ.  2008 ಅಕ್ಟೋಬರ್ 11 ರ ಪ್ರಕಾರ ಸ್ವಿಜರ್‍ಲ್ಯಾಂಡ್‍ನಲ್ಲಿ ಬ್ಯಾಂಕಿಂಗ್‍ನಿಂದಾಗುವ ಸರಾಸರಿ ಲಾಭದ ಅನುಪಾತ (ಲೀವರೇಜ್ ರೇಷಿಯೋ) 29 ಕ್ಕೆ 1 ರಷ್ಟಿದೆ.  ಸ್ವಿಜರ್‍ಲ್ಯಾಂಡ್‍ನಲ್ಲಿ ಸೆಂಟ್ರಲ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‍ಗಳ ವಿದೇಶಿಯರ ಅಚ್ಚುಮೆಚ್ಚಿನ ಬ್ಯಾಂಕ್‍ಗಳಾಗಿವೆ.
ಹಣ ಇಡಲು ಸ್ವಿಸ್ ಬ್ಯಾಂಕ್‍ಗಳೇ ಏಕೆ ಆಯ್ಕೆ ?
ಇದಕ್ಕೆ ಪ್ರಮುಖ ಕಾರಣವೆಂದರೆ ಗ್ರಾಹಕರ ಖಾತೆ ಸೇರಿದಂತೆ ಯಾವುದೇ ರೀತಿಯ ಮಾಹಿತಿಯನ್ನು ಸ್ವಿಸ್ ಬ್ಯಾಂಕ್‍ಗಳು ಬಿಟ್ಟುಕೊಡುವುದಿಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಸ್ವಿಸ್ ಬ್ಯಾಂಕ್‍ಗಳು ತೆರಿಗೆಗಳ್ಳರ ಸ್ವರ್ಗ.  ಅನಿವಾಸಿ ಸ್ವಿಸ್ ನಾಗರಿಕರ ಠೇವಣಿಗಳ ಮೇಲಿನ ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ.  ಅಚ್ಚರಿಯೆಂದರೆ, ಸ್ವಿಸ್‍ಬ್ಯಾಂಕ್‍ಗಳಲ್ಲಿ ಖಾತೆದಾರರ ಹೆಸರುಗಳೇ ಇರುವುದಿಲ್ಲ.  ಹೆಸರುಗಳ ಬದಲಾಗಿ ನಂಬರ್ ನೀಡಲಾಗುತ್ತದೆ.  ಅಮೆರಿಕಾ ಡಾಲರ್‍ನಂತೆ ಸ್ವಿಸ್ ಕರೆನ್ಸಿ ಕೂಡಾ ವಿದೇಶಿ ವಿನಿಮಯದಲ್ಲಿ ಸದೃಢವಾಗಿದೆ.  ಅಲ್ಲದೆ ಈ ಬ್ಯಾಂಕುಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಚಿನ್ನವನ್ನು ಹೊಂದಿರುತ್ತವೆ.  ಒಂದು ವೇಳೆ, ಬ್ಯಾಂಕ್ ಏನಾದರೂ ದಿವಾಳಿಯಾದರೆ ಗ್ರಾಹಕ ಹಾಗೂ ಬ್ಯಾಂಕ್ ನಡುವಿನ ಒಪ್ಪಂದದಂತೆ ಗ್ರಾಹಕನಿಗೆ ಹಣ ವಾಪಸ್ ದೊರೆಯುತ್ತದೆ.  ಹಾಗಾಗಿ ಠೇವಣಿ ಇಟ್ಟ ಹಣಕ್ಕೆ ಮೋಸ ಇಲ್ಲ.
ಯಾರು ಬೇಕಾದರೂ ಇಲ್ಲಿ ಹಣವಿಡಬಹುದಾ ?
ಅಗತ್ಯವಾಗಿ.  18 ವರ್ಷ ಮೇಲ್ಪಟ್ಟ ಪಾಸ್‍ಪೋರ್ಟ್ ಹೊಂದಿರುವ ಯಾರು ಬೇಕಾದರೂ ಇಲ್ಲಿ ಹಣ ಇಡಬಹುದು.  ನಿಮಗೊಂದು ಸತ್ಯ ತಿಳಿದಿರಲಿ.  ಸ್ವಿಸ್‍ಬ್ಯಾಂಕ್‍ಗಳು ಕೇವಲ ಮಿಲಿಯನೇರ್‍ಗಳಿಗಲ್ಲ.  ಇದು ಶುದ್ಧಾತಿಶುದ್ಧ ಸುಳ್ಳು.  ಇನ್ನೊಂದು ವಿಷಯವೆಂದರೆ ಅಕೌಂಟ್ ತೆರೆಯಲು ಸ್ವಿಜರ್‍ಲ್ಯಾಂಡ್‍ಗೆ ಹೋಗ ಬೇಕಂತೇನೂ ಇಲ್ಲ.  ಇದಲ್ಲದೇ ಯಾವ ದೇಶದ ವ್ಯಕ್ತಿಗಳು ಈ ಸ್ವಿಸ್ ಬ್ಯಾಂಕ್‍ಗಳಲ್ಲಿ ಹಣ ಇಡಬಹುದು ಎಂದು ಪಟ್ಟಿ ಮಾಡಲಾಗಿದೆ.  ಈ ಪ್ರಮುಖ ರಾಷ್ಟ್ರಗಳ ಜೊತೆಗೆ ಭಾರತದ ಹೆಸರೂ ಇದೆ.  ಹಾಗಾಗಿ ಹೆದರಿಕೆ ಇಲ್ಲದೇ ಸ್ವಿಸ್ ಬ್ಯಾಂಕುಗಳಲ್ಲಿ ಅಕೌಂಟ್ ತೆರೆಯಬಹುದಾಗಿದೆ.  ಅಲ್ಲದೆ ಅಕೌಂಟ್‍ಗೆ ನೇರವಾಗಿ ಇಂಟರ್‍ನೆಟ್ ಬ್ಯಾಂಕಿಂಗ್ ಮೂಲಕ ಹಣ ಹಾಕಬಹುದಾಗಿದೆ.  ಚೆಕ್‍ಗಳಾದರೆ ನೇರವಾಗಿ ಪೋಸ್ಟ್ ಮೂಲಕ ಕಳಿಸಬಹುದಾಗಿದೆ.
ಹಣ ವಾಪಸ್ ಬರುತ್ತಾ ?
ಬಂದೇ ಬರುತ್ತೆ.  ಖಾತೆ ತೆರೆದಿರುವ ಬ್ಯಾಂಕ್ ಹಣ ತೆಗೆಯುವ ಸಲುವಾಗಿಯೇ ಡೆಬಿಟ್ ಕಾರ್ಡ್ ನೀಡುತ್ತದೆ.  ಇದಕ್ಕಾಗಿ 800 ಡಾಲರ್ ಹಣವನ್ನು ಠೇವಣಿಯಾಗಿ ಇಟ್ಟಿರಬೇಕು.  ಈ ಕಾರ್ಡ್ ಮೂಲಕ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹಣ ತೆಗೆಯಬಹುದಾಗಿದೆ.  ಇದಷ್ಟೇ ಅಲ್ಲ ಅಕೌಂಟ್ ಅನ್ನು ಇಂಟರ್‍ನೆಟ್ ಬ್ಯಾಂಕಿಂಗ್ ಮೂಲಕ ವ್ಯವಹರಿಸ ಬಹುದು.  ಹಣ ತೆಗೆಯುತ್ತಿರ ಬಹುದು, ಹಾಕುತ್ತಲೂ ಇರಬಹುದು.  ತೆರಿಗೆ ವಂಚಕರ ಹಣ ಕೇಳಿದರೆ ಸ್ವಿಸ್ ಬ್ಯಾಂಕುಗಳ ಬಲವಂತವಾಗಿ ನೀಡಿರುವ ಉದಾಹರಣೆಗಳು ಕಡಿಮೆ.  ಎರಡನೇ ಮಹಾಯುದ್ಧದ ನಂತರ ಸ್ವಿಸ್ ಬ್ಯಾಂಕುಗಳು ಅಮೆರಿಕಕ್ಕೆ, ಫ್ರಾನ್ಸ್‍ಗೆ, ಬ್ರಿಟನ್‍ಗೆ ನಾಜಿ ವಿವಾದದಿಂದ ಪಾರಾಗಲು 65 ದಶಲಕ್ಷ ಡಾಲರ್ ಹಣವನ್ನು ವಾಪಸ್ ನೀಡಿದ್ದವು.  ಸೆಪ್ಟಂಬರ್ 9/11 ರ ದಾಳಿ ಬಳಿಕೆ ಒಸಾಮಾ ಬಿನ್ ಲಾಡೆನ್ ಇಟ್ಟಿದ್ದ ಹಣವನ್ನು ಬ್ಯಾಂಕು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಇದಿಷ್ಟೇ ಅಲ್ಲ, ಭಾರತಿಯರು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಹಣವನ್ನು ವಾಪಸ್ ತರಬಹುದು.  ಮಾದಕ ವಸ್ತುಗಳ ಕಳ್ಳಸಾಗಾಣೆ, ಹವಾಲಾ, ತೆರಿಗೆ ಕಳ್ಳತನ, ಭಯೋತ್ಪಾದನೆ, ದಿವಾಳಿ, ಡೈವೋರ್ಸ್ ಪ್ರಕರಣಗಳ ಸಂಬಂಧ ಬ್ಯಾಂಕುಗಳು ಅಕೌಂಟ್‍ದಾರರ ಕುರಿತಂತೆ ಮಾಹಿತಿ ಬಹಿರಂಗಪಡಿಸುತ್ತವೆ.  ಈ ಪ್ರಕರಣದಲ್ಲಿ ಅಕೌಂಟ್‍ದಾರರ ಆರೋಪ ಋಜುವಾತುಗೊಳಿಸಿದರೆ ಮಾತ್ರ ಬ್ಯಾಂಕ್ ಅಕೌಂಟ್ ರಹಸ್ಯ ಬಹಿರಂಗಗೊಳಿಸುತ್ತದೆ.
ಯಾವ ದೇಶದ ಹಣ ಜಾಸ್ತಿ ಇದೆ ?
    ಭಾರತದ್ದೇ…!
ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ತೆರಿಗೆಗಳ್ಳರಿರುವುದು ಭಾರತದಲ್ಲೇ.  ಅದು ಹೇಗೆ ಅಂತೀರಾ, ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಹಣದ ಪ್ರಮಾಣ ನೋಡಿದರೆ ಗೊತ್ತಾಗುತ್ತದೆ.  2006 ರ ಅಂಕಿ-ಅಂಶಗಳ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿದ್ದ ಹಣದ ಪ್ರಮಾಣ 1.4 ಲಕ್ಷ ಕೋಟಿ ಡಾಲರ್ ಹಣ.  ಇದೇ ಸಾಲಿನಲ್ಲಿರುವ ಇತರೆ ರಾಷ್ಟ್ರಗಳೆಂದರೆ, ರಷ್ಯಾ (610 ಶತಕೋಟಿ ಡಾಲರ್),  ಚೀನಾ (213 ಶತಕೋಟಿ ಡಾಲರ್),  ಬ್ರಿಟನ್ (210 ಶತಕೋಟಿ ಡಾಲರ್), ಉಕ್ರೇನ್ (140 ಶತಕೋಟಿ ಡಾಲರ್) ಹಾಗೂ ಇತರೆ ದೇಶಗಳು (300 ಶತಕೊಟಿ ಡಾಲರ್) ಹಣ ಇಟ್ಟಿವೆ.  (ಕೃಪೆ)

Leave a Comment