ಲಾಸ್ ಏಂಜಲೀಸ್ ಗೆ ಶಿಫ್ಟ್, ವಿಚಾರವನ್ನು ತಳ್ಳಿ ಹಾಕಿದ ಪ್ರಿಯಾಂಕ

ಇತ್ತೀಚಿನ ದಿನಗಳಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಬಾಲಿವುಡ್ ಗಿಂತ, ಜಾಸ್ತಿ ಹಾಲಿವುಡ್ ನಲ್ಲೇ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ, ಇನ್ನು ಮುಂದಿನ ದಿನಗಳಲ್ಲಿ ಪಿಗ್ಗಿ ಲಾಸ್ ಏಂಜಲೀಸ್ ನಲ್ಲಿ ನೆಲೆಸಲಿದ್ದಾರೆ ಎಂಬ ಗಾಸಿಬ್ ಬಾಲಿವುಡ್ ಅಂಗಳದಲ್ಲಿ ಹಬ್ಬಿತ್ತು. ಆದರೆ ಈ ಗಾಸಿಪ್ ಗಳಿಗೆ ನಟಿ ಪ್ರಿಯಾಂಕ ಚೋಪ್ರಾ ಅವರು ಖಡಕ್ ಆಗಿ ಸ್ಪಷ್ಟನೆ ನೀಡುವ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸದ್ಯಕ್ಕೆ ನನಗೆ ಲಾಸ್ ಏಂಜಲೀಸ್ ನಲ್ಲಿ ನೆಲೆಸುವ ಯಾವುದೇ ಯೋಜನೆಗಳಿಲ್ಲ’ ಎಂದು 34 ವರ್ಷದ ನಟಿ ಪ್ರಿಯಾಂಕ ಚೋಪ್ರಾ ಅವರು ತಿಳಿಸಿದ್ದಾರೆ.[ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ]
‘ನಾನು ಇಂತಹ ತಮಾಷೆ ಸುದ್ದಿಗಳನ್ನು ಆವಾಗವಾಗ ಕೇಳುತ್ತಾ ಇರುತ್ತೇನೆ. ಸದ್ಯಕ್ಕೆ ನ್ಯೂಯಾರ್ಕ್ ನಲ್ಲಿ ‘ಕ್ವಾಂಟಿಕೋ’ ಸೀರಿಯಲ್ ಶೂಟಿಂಗ್ ನಡೆಯುತ್ತಿದೆ. ಅಷ್ಟಕ್ಕೂ ನನ್ನ ಮನೆ ಇರೋದು ಮುಂಬೈನಲ್ಲಿ ಹೊರತು ಲಾಸ್ ಏಂಜಲೀಸ್ ನಲ್ಲಿ ಅಲ್ಲ’ ಎಂದು ಪ್ರಿಯಾಂಕ ಚೋಪ್ರಾ ಅವರು ಗಾಸಿಪ್ ಹಬ್ಬಿಸಿದವರಿಗೆ ಟ್ವಿಟ್ಟರ್ ಮೂಲಕ ಬಿಸಿ ಮುಟ್ಟಿಸಿದ್ದಾರೆ.[ಚಿನ್ನದ ಮೇಲಿನ ವ್ಯಾಮೋಹಕ್ಕೆ ಪ್ರಿಯಾಂಕ ಹೀಗಾ ಮಾಡೋದು.?] ಹಾಲಿವುಡ್ ನಲ್ಲಿ ಜಾಸ್ತಿ ತಮ್ಮನ್ನು ತೊಡಗಿಸಿಕೊಂಡಿರುವ ನಟಿ ಪ್ರಿಯಾಂಕ ಅವರು ‘ಕ್ವಾಂಟಿಕೋ’ ಧಾರಾವಾಹಿಯ ಲೀಡ್ ನಟಿ. ಹಾಗಾಗಿ ‘ಕ್ವಾಂಟಿಕೋ’ದಲ್ಲಿ ಇನ್ನೂ ಮುಂದೆ ನಟಿಸೋ ಅವಕಾಶ ಸಿಕ್ಕರೆ, ಮುಂದಿನ ದಿನಗಳಲ್ಲಿ ಪಿಗ್ಗಿ ಐದು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಲಿದ್ದಾರೆ ಎಂದು ಸುದ್ದಿಯಾಗಿತ್ತು.[‘ಇವರನ್ನು’ ಪ್ರಿಯಾಂಕ ಅನ್ಕೊಂಡ್ರಾ, ಖಂಡಿತ ಅಲ್ವೇ ಅಲ್ಲ.!]

Leave a Comment