ಮನಸೊರೆಗೈದ ರಾಯಲ್ ಎನ್ ಫೀಲ್ಡ್ ಥಂಡರ್ ಕ್ಯಾಟ್

ವಾಹನ ಮಾರ್ಪಾಡು ಸಂಸ್ಥೆಗಳ ಪಾಲಿಗೆ ರಾಯಲ್ ಎನ್ ಫೀಲ್ಡ್ ಬುಲೆಟ್ ಗಳು ಎಂದೂ ಪ್ರಿಯವೆನಿಸಿದೆ. ಸದೃಢವಾದ ದೇಹ ಹಾಗೂ ಕ್ಲಾಸಿಕ್ ವಿನ್ಯಾಸಗಳು ಬೈಕ್ ಪ್ರೇಮಿಗಳ ಪಾಲಿಗೆ ಅತ್ಯಂತ ಪ್ರಿಯವೆನಿಸಿದೆ. ಚೆನ್ನೈ ಮೂಲದ ಪ್ರತಿಷ್ಠಿತ ರಾಯನ್ ಎನ್ ಫೀಲ್ಡ್ ಸಂಸ್ಥೆಗಳು ಅನೇಕ ಐಕಾನಿಕ್ ಮಾದರಿಗಳನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ. ಇವುಗಳಲ್ಲಿ ಥಂಡರ್ ಬರ್ಡ್ ಕೂಡಾ ಒಂದಾಗಿದೆ. ಕ್ರೂಸರ್ ವಿಭಾಗದಲ್ಲಿ ಅದ್ಭುತ ಚಾಲನಾ ಅನುಭವ ಖಾತ್ರಿಪಡಿಸುವ ಥಂಡರ್ ಬರ್ಡ್ ದೇಶದಲ್ಲಿ 500 ಹಾಗೂ 350 ಆವೃತ್ತಿಗಳು ಮಾರಾಟದಲ್ಲಿವೆ.

Leave a Comment