ಭಾರತದ ಸಂವಿಧಾನ ರಾಷ್ಟ್ರೀಯ ಧರ್ಮ

muಭಾರತ ಹಲವು ಧರ್ಮ, ಭಾಷೆ ಮತ್ತು ಜಾತಿಗಳಿಂದ ಕೂಡಿರುವ ಬಹುಸಂಸ್ಕøತಿ ದೇಶವಾದರೂ ನಿರಾಳವಾಗಿದೆಯೆಂದರೆ ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಮತ್ತು ಕರ್ನಾಟಕ ಟಿಪ್ಪುಸುಲ್ತಾನ್ ಅಭಿಮಾನಿಗಳ ವೇದಿಕೆ ಸಹಯೋಗದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನ ಮತ್ತು ಧರ್ಮ ನಿರಪೇಕ್ಷೆ ವಿಷಯ ಕುರಿತು ಮಾತನಾಡಿ, ನಮ್ಮಲ್ಲಿ ಜಾತಿ ಪ್ರಧಾನವಾದ ಧರ್ಮಗಳಿವೆ. ಆದರೆ, ರಾಷ್ಟ್ರೀಯ ಧರ್ಮ ಬೇಕಿತ್ತು. ಅದೇ ನಮ್ಮ ಭಾರತೀಯ ಸಂವಿಧಾನ. ಭಾರತ ಏಕೀಕೃತವಾಗುವಂತೆ ಮಾಡಿದ ಶಕ್ತಿ ಸಂವಿಧಾನಕ್ಕಿದೆ. ಯಾರೂ ಕೂಡ ಜಾತಿ, ಧರ್ಮ ಬಹಿರಂಗವಾಗಿ ತರಬಾರದು. ಸಂವಿಧಾನ ಮತ್ತು ವಚನ ವಿಧಾನದ ಮಧ್ಯೆ ಅನ್ಯೋನ್ಯತೆ ಇದೆ. ಬಾಬಾ ಸಾಹೇಬರು ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಎಂತಹ ಸಂವಿಧಾನ ಬೇಕು ಎಂದು ಯೋಚಿಸಿ ಕೊಟ್ಟಿದ್ದಾರೆ. ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಶಕ್ತಿ ಸಂವಿಧಾನಕ್ಕಿದೆ. ಸಂವಿಧಾನ, ಸುಪ್ರೀಂಕೋರ್ಟ್ ಹಾಗೂ ಅನುಭವ ಮಂಟಪದ ಆಶಯ ಒಂದೇ. ಸಮಾಜದಲ್ಲಿ ಅನೇಕರಿಗೆ ಸಮಾನತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಸವಣ್ಣನವರು ಆನುದೇವ ಹೊರಗಣವನು ಎಂದು ಹೇಳಿದ್ದಾರೆ. ಅವರೆಲ್ಲರಿಗೂ ಸಮಾನತೆ ಸಿಗಬೇಕು ಎಂಬುದು ಅವರ ಆಶಯ. ನಮ್ಮಲ್ಲಿ ಇನ್ನು ಮತೀಯ ಹಾಗು ಜಾತಿಯ ಭಾವನೆಗಳು ಇವೆ ಎಂದರು.
ವಿಷಯಾವಲೋಕನ ಮಾಡಿದ ದಾವಣಗೆರೆ ಆರ್.ಎಲ್. ಕಾನೂನು ಕಾಲೇಜಿನ ಪ್ರಾಧ್ಯಾಪಕ ಪೆÇ್ರ. ಸೋಮಶೇಖರಪ್ಪ ಎಂ. ಮಾತನಾಡಿ, ಭಾರತ ಸ್ವಾತಂತ್ರ್ಯ ಪಡೆದ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಅದೊಂದು ಧರ್ಮಗ್ರಂಥ. ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅನುಚ್ಛೇದ 25ರಿಂದ 28ರವರೆಗೆ ಧರ್ಮದ ಬಗ್ಗೆ ಹೇಳಲಾಗಿದೆ. ಯಾವುದೇ ಧರ್ಮ ಅನುಸರಿಸಬಹುದು, ನಮಗಿಷ್ಟ ಬಂದಂತೆ ಸ್ವತಂತ್ರವಾಗಿ ಬದುಕಬಹುದು, ಇಷ್ಟ ಬಂದರೆ ಪೂಜಿಸಬಹುದು ಇಲ್ಲವೆ ಬಿಡಬಹುದು. ಧಾರ್ಮಿಕ ನಂಬಿಕೆಯಿದ್ದರೆ ಇಂಥz್ದÉೀ ದೇವರನ್ನು ಪೂಜಿಸಬೇಕು ಎಂದು ಯಾರೂ ಹೇಳುವಂತಿಲ್ಲ. ಪೂಜೆ ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ರಾಜ್ಯ ಸರ್ಕಾರದವರು ಸಾರ್ವಜನಿಕ ಶಾಂತಿಗೆ ಭಂಗ ಬಾರದಂತೆ ಕೆಲವು ನಿಯಮಗಳನ್ನು ಹೇರಬಹುದು. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕೆಲವು ವಿಚಾರಗಳಲ್ಲಿ ನಾವು ಹಿಂದುಳಿದಿz್ದÉೀವೆ. ಕಾರಣ ನಮಲ್ಲಿರುವ ಜಾತಿ ವ್ಯವಸ್ಥೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳುವಂತೆ ಎಲ್ಲರಿಗೂ ಸಮಾನವಾಗಿ ನೋಡುವುದೇ ನಿಜವಾದ ಧರ್ಮ. ಎಲ್ಲರನ್ನು ನಮ್ಮವರು ಎಂದು ಕಾಣಬೇಕು. ಇವನಾರವ, ಇವನಾರವ ಎನ್ನದೆ ಇವನಮ್ಮವ, ಇವನಮ್ಮವ ಎಂಬುದೇ ನಿಜವಾದ ಧರ್ಮ. ಧರ್ಮ ಎನ್ನುವುದು ಜಾತಿ ಆಧಾರದ ಮೇಲಿರುವುದಲ್ಲ. ಇಂದು ವಿಶಾಲವಾಗಿ ಯೋಚಿಸುವಂತಹ ಶಕ್ತಿ ನಮ್ಮಲ್ಲಿಲ್ಲ. ನಾವು ನಮ್ಮವರು ಎಂಬ ಭಾವನೆ ಎಲ್ಲಿ ಇರುತ್ತದೆಯೋ ಅಲ್ಲಿ ನಿಜವಾದ ಧರ್ಮ ಇರುತ್ತದೆ ಎಂದರು.

Leave a Comment