‘ದೊಡ್ಮನೆ’ ಅಂದ್ರೆ ಏನು.? ಸೂರಿ ಬಾಯ್ಬಿಟ್ಟ ದೊಡ್ಡ ಸೀಕ್ರೆಟ್ ಇಲ್ಲಿದೆ.!

ದುನಿಯಾ ಸೂರಿ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ವರ್ಷದ ಹಿಂದೆ ‘ದೊಡ್ಮನೆ ಹುಡ್ಗ’ ಸೆಟ್ಟೇರಿತ್ತು. ಅಲ್ಲಿಂದ ಇಲ್ಲಿಯವರೆಗೂ ‘ದೊಡ್ಮನೆ ಹುಡ್ಗ’ ಚಿತ್ರದ ಕುರಿತು ಅನೇಕ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಆದ್ರೆ, ನಿರ್ದೇಶಕ ಸೂರಿ ಈ ಸಿನಿಮಾಗೆ ‘ದೊಡ್ಮನೆ ಹುಡ್ಗ’ ಅಂತ ಟೈಟಲ್ ಯಾಕಿಟ್ರು ಎಂಬ ಸತ್ಯ ಯಾರಿಗಾದರೂ ಗೊತ್ತಾ.?

ಡಾ.ರಾಜ್ ‘ಅಭಿಮಾನಿಗಳೇ ದೇವರುಗಳು’ ಅಂತ್ಹೇಳ್ತಿದ್ರು. ಅದನ್ನ ಸ್ವಲ್ಪ ರೀಮಿಕ್ಸ್ ಮಾಡಿ ‘ದೊಡ್ಮನೆ ಹುಡ್ಗ’ ಚಿತ್ರದಲ್ಲಿ ‘ಅಭಿಮಾನಿಗಳೇ ನಮ್ಮನೆ ದೇವ್ರು..’ ಹಾಡು ಬರೆಸಿದ್ದಾರೆ ಸೂರಿ. [‘ದೊಡ್ಮನೆ ಹುಡ್ಗ’ ಟ್ರೈಲರ್ ನಲ್ಲಿ ಅದೆಷ್ಟು ವಿಶೇಷತೆಗಳಿವೆ ಗೊತ್ತಾ.?]

ಹಾಗಾದ್ರೆ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಗೂ ‘ದೊಡ್ಮನೆ ಹುಡ್ಗ’ ಚಿತ್ರಕ್ಕೂ ಲಿಂಕ್ ಇದ್ಯಾ.? ಈ ಡೌಟ್ ನ ಕ್ಲಿಯರ್ ಮಾಡ್ಬೇಕು ಎಂಬ ಕಾರಣಕ್ಕೆ ದುನಿಯಾ ಸೂರಿ ಜೊತೆ ನಾವು ಸಣ್ಣ ಚಿಟ್-ಚಾಟ್ ಮಾಡಿದ್ವಿ.

Leave a Comment