ಗಣೇಶ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

gameshaಬೆಂಗಳೂರು, ಸೆಪ್ಟೆಂಬರ್, 05: ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ನರೇಂದ್ರ ಮೋದಿ “ಗಣಪತಿ ಬಪ್ಪಾ ಮೋರಯಾ, ದೇಶದ ಎಲ್ಲ ಜನರ ಮೇಲೆ ಗಣೇಶನ ಅನುಗ್ರಹವಿರಲಿ” ಎಂದು ಶುಭಾಶಯ ಕೋರಿದ್ದಾರೆ.[ಬೆಂಗಳೂರಿಗರೇ, ಗಣೇಶ ಮೂರ್ತಿ ಕೊಳ್ಳುವ ಮುನ್ನ ಗಮನಿಸಿ..]

ದೇಶಾದಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು ಬೆಂಗಳೂರಿನಲ್ಲೂ ಹಬ್ಬದ ಆರ್ಭಟ ಜೋರಾಗಿದೆ. ವಿವಿಧ ಗಣೇಶ ದೇವಾಲಯದಲ್ಲಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.

Leave a Comment