ಕೊನೆ ಕ್ಷಣದಲ್ಲಿ ಹೈ ಕಮಿಷನರ್‌ ಕಾರ್ಯಕ್ರಮ ರದ್ದು:ಪಾಕ್‌ ರಾಜತಾಂತ್ರಿಕ ಬಸಿತ್‌ಗೆ ಭಾರತ ಸಮನ್ಸ್

Related Post

  • No related post.

ಪಾಕಿಸ್ತಾನಕ್ಕೆ ಭಾರತದ ಹೈಕಮಿಷನರ್‌ ಆಗಿರುವ ಗೌತಮ್‌ ಬಂಬವಾಲೆ ಅವರ ನಿಗದಿತ ಕರಾಚಿಯ ಭಾಷಣವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿರುವ ಪಾಕ್‌ನ ಕ್ರಮವನ್ನು ಖಂಡಿಸಿರುವ ಭಾರತವು ಆ ರಾಷ್ಟ್ರದ ರಾಜತಾಂತ್ರಿಕ ಅಬ್ದುಲ್‌ ಬಸಿತ್‌ ಅವರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ.

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ವಿರೋಧಿಸಿ ಬಂಬವಾಲೆ ಅವರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ54050235.cms ಕರಾಚಿಯಲ್ಲಿ ಚೇಂಬರ್‌ ಆಫ್‌ ಕಾಮರ್ಸ್‌ನ ಸಭೆಯಲ್ಲಿ ಮಂಗಳವಾರ ಅವರು ಮಾಡಬೇಕಿದ್ದ ಭಾಷಣವನ್ನು ರದ್ದುಗೊಳಿಸಲಾಗಿದೆ. ಇದು ಸಂಘಟಕರು ಮಾಡಿರುವ ಬಹು ದೊಡ್ಡ ಅಗೌರವ. ಕಾರ್ಯಕ್ರಮ ರದ್ದುಪಡಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ಭಾರತ ಪ್ರತಿಪಾದಿಸಿದೆ.

ಜಮ್ಮುಮತ್ತು ಕಾಶ್ಮೀರದಲ್ಲಿ ಎರಡು ತಿಂಗಳಿಂದ ಹಿಂಸಾಚಾರ ನಡೆಯುತ್ತಿದ್ದು, ಪಾಕ್‌ ನಿರಂತರವಾಗಿ ಪ್ರತಿಕ್ರಿಯಿಸುವುದನ್ನು ಸಭೆಯಲ್ಲಿ ಭಾಗವಹಿಸುವ ಮೊದಲು ಕರಾಚಿಯಲ್ಲಿ ಬಂಬವಾಲೆ ಖಂಡಿಸಿದ್ದರು. ಗಾಜಿನ ಮನೆಯಲ್ಲಿ ಇರುವವರು ಬೇರೆಯವರತ್ತ ಕಲ್ಲು ಎಸೆಯಬಾರದು. ಬೇರೆ ದೇಶದ ಸಮಸ್ಯೆ ಬಗೆಹರಿಸುವ ಮೊದಲು ನಿಮ್ಮದನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದ್ದರು.

Leave a Comment