ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಸವರಾಜು ಟೀಕೆ

dbasavarajಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವ ಪಕ್ಷಗಳ ನೀಯೋಗವು ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬರ ಪರಿಹಾರಕ್ಕೆ ರು.4702 ಕೋಟಿ ಬಿಡಗಡೆ ಮಾಡಬೇಕೆಂದು ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿಯೂ ರಾಜಕಾರಣ ಮಾಡುತಿದ್ದು, ಮಲತಾಯಿ ಧೋರಣೆ ಅನುಸರಿಸಿ ರಾಜ್ಯಕ್ಕೆ ಅನ್ಯಾಯ ವೇಸಗಿದ್ದಾರೆ ಎಂದು ಕರ್ನಾಟ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ತೀವ್ರವಾಗಿ ಟೀಕೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಜನ ಮತ್ತು ಜಾನುವರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಮುಂಗಾರು ಬೆಳೆ ಕೈಕೊಟ್ಟಿದರಿಂದ ರಾಜ್ಯದಲ್ಲಿ 36.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ರು.17193 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಇದರಿಂದ 35 ಲಕ್ಷ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜ್ಯದ 176 ತಾಲೂಕುಗಳ ಪೈಕಿ 139 ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ರಾಜ್ಯದ ಬಹುತೇಕ ಭಾಗ ತೀವ್ರ ಬರಸ್ಥಿತಿ ಎದುರುಸುತ್ತಿದೆ. ರಾಜ್ಯವು ಕಠಿಣ ಬರದಿಂದ ಕೃಷಿ, ವಿದ್ಯುತ್ ಉತ್ಪದನೆ, ನೀರಿನ ಮರುಪೂರಣ, ಕುಡಿಯುವ ನೀರು ಪೂರೈಕೆ ಹಾಗೂ ಮೇವಿನ ಲಭ್ಯತೆಯ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಪ್ರಸುತ್ತ ಹಿಂಗಾರು ಹಂಗಾಮಿನ ಅವಧಿಯಲ್ಲೂ ಮಳೆಯ ಪ್ರಮಾಣದಲ್ಲಿ ದಾಖಲೆಯ ಶೇ. 80ರಷ್ಟು ಕೊರತೆ ಉಂಟಾಗಿರುವುದು ರಾಜ್ಯದ ಸಂಕಷ್ಟ ಹೆಚ್ಚಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನಿಯಮಾನುಸಾರ ರು. 4702 ಕೋಟಿ ರೂಪಾಯಿಗಳನ್ನು ಕೊಡಬೇಕಿತ್ತು. ಕೇವಲ ರು. 1782 ಕೋಟಿ ನೀಡಿರುವುದು ರಾಜ್ಯದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ಮುಂದುವರೆಸುವುದು ಇದರಿಂದ ತಿಳಿಯುತ್ತದೆಂದು ಡಿ.ಬಸವರಾಜ್ ತಿಳಿಸಿದ್ದಾರೆ.

Leave a Comment