ಎಲ್ಲರೂ ಡಾಕ್ಟರ್, ಇಂಜಿನಿಯರ್ ಆದರೆ `ಸಮಾಜ’ ದ ಗತಿಯೇನು ?

ಈಗಷ್ಟೇ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದೆ.  100 ಕ್ಕೆ 99 ವಿದ್ಯಾರ್ಥಿಗಳು “ನಾನು ಡಾಕ್ಟರ್ ಆಗಬೇಕು”, “ನಾನು ಇಂಜಿನಿಯರ್ ಆಗಬೇಕು” ಎಂದು ತಮ್ಮ ಅಭಿಪ್ರಾಯ ವ್ಯಕ್ತಿಪಡಿಸುತ್ತಿದ್ದಾರೆಯೇ ವಿನಃ ಬೇರೆ ವಿಭಾಗಗಳ್ಯಾವುವೂ ಅವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸವೇ ಸರಿ.  ಕಲಾ ವಿಭಾಗದ ಬಗ್ಗೆ ಎಂದಿನಂತೆ ನಿಕೃಷ್ಟ ಧೋರಣೆ ಮುಂದುವರಿದಿದೆ.  ಎಲ್ಲರೂ ಕೇವಲ ಡಾಕ್ಟರ್, ಇಂಜಿನಿಯರ್ ಆಗ ಬಯಸಿದರೆ ದೇಶದ ಭವಿಷ್ಯಕ್ಕೆ ಅರ್ಥವಿಲ್ಲ.  ನಾಗರೀಕ ಸಮಾಜಕ್ಕೆ ಕೇವಲ ಡಾಕ್ಟರ್, ಇಂಜಿನಿಯರ್ ಇದ್ದರೆ ಸಾಕೇ ? ಬೇರೆ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.  ಮನೆಗಳಲ್ಲಿ ತಮ್ಮ ಮಕ್ಕಳಿಗೆ ಪೋಷಕರು ಡಾಕ್ಟರ್ ಅಥವಾ ಇಂಜಿನಿಯರ್ ಆಗಲೇಬೇಕೆಂದು ಅವರ ತಲೆ ತುಂಬಿಬಿಟ್ಟಿರುತ್ತಾರೆ.  ಮಕ್ಕಳಿಗೆ ಇವೆರಡು ಇಲ್ಲದಿದ್ದರೆ ಜೀವನವೇ ಇಲ್ಲವೆಂದು ಬಿಂಬಿಸಿಬಿಟ್ಟಿರುತ್ತಾರೆ ಪೋಷಕರು.  ಕಲಾ ವಿಭಾಗವಂತೂ ದಿನೇ ದಿನೇ ಅಸ್ಪøಶ್ಯತೆಗೊಳಗಾಗಿ ವಿದ್ಯಾರ್ಥಿಗಳಿಂದ ದೂರವುಳಿಯುತ್ತಿದೆ. ಇಂದಿನ ಸಮಾಜಕ್ಕೆ `ಸಮಾಜ’ ಕೂಡ ಅತಿ ಮುಖ್ಯವೆಂಬ ಸತ್ಯವನ್ನು ಪೋಷಕರು, ವಿದ್ಯಾರ್ಥಿಗಳು ಅರಿಯಬೇಕು. – ಸಂ.

Leave a Comment